ನವದೆಹಲಿ:ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಸೋಮವಾರ ಸಫ್ದರ್‌ಜಂಗ್ ರಸ್ತೆಯ ಇಂದಿರಾ ಗಾಂಧಿ ಸ್ಮಾರಕಕ್ಕೆ ತೆರಳಿ (ಐಎಎನ್‌ಎಸ್) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. "54 ನೇ ದಿನದ ಭಾರತ್ ಜೋಡೋ ಯಾತ್ರೆಯು ಶಾದ್‌ನಗರದಲ್ಲಿ ಬೆಳಗ್ಗೆ 5.30 ಕ್ಕೆ ಪ್ರಾರಂಭವಾಯಿತು. ಭಾರತ ಯಾತ್ರಿಗಳು ಸರ್ದಾರ್ ಪಟೇಲ್ ಮತ್ತು ಇಂದಿರಾ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ನಂತರ ಗುಜರಾತ್‌ನ ಮೋರ್ಬಿ ತೂಗು ಸೇತುವೆ ದುರಂತದಲ್ಲಿ ಮಡಿದವರ ಸ್ಮರಣಾರ್ಥ 2 ನಿಮಿಷಗಳ ಮೌನ ಆಚರಿಸಲಾಯಿತು ಎಂದು " ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
1984 ರಲ್ಲಿಅಂಗರಕ್ಷಕರಿಂದ ಹತ್ಯೆ:1984 ರಲ್ಲಿ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರು ಅಂಗರಕ್ಷಕರಿಂದ ಸಫ್ದರ್‌ಜಂಗ್ ರಸ್ತೆಯ ನಿವಾಸದಲ್ಲಿ ಹತ್ಯೆಯಾದರು. ಪಂಜಾಬ್‌ನಲ್ಲಿ ದಂಗೆಯ ಉತ್ತುಂಗದಲ್ಲಿ ಮತ್ತು ಆಪರೇಷನ್ ಬ್ಲೂ ಸ್ಟಾರ್‌ನ ನಂತರ ಇಂದಿರಾ ಗಾಂಧಿಯನ್ನು ಅಂದು ಅಂಗರಕ್ಷಕ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಕೊಂದರು.
ಪಂಜಾಬ್‌ನ ಅಮೃತಸರದ ಹರ್ಮಂದಿರ್ ಸಾಹಿಬ್‌ನ ಗೋಲ್ಡನ್ ಟೆಂಪಲ್‌ನಿಂದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಅವರ ಅನುಯಾಯಿಗಳನ್ನು ತೆಗೆದುಹಾಕಲು ಕಾರ್ಯಾಚರಣೆ ಹತ್ಯೆಗೆ ಕಾರಣವಾಯಿತು ಎನ್ನಲಾಗಿದೆ. ಇಂದಿರಾ ಗಾಂಧಿಯವರು 1966 ರಿಂದ 1977 ರವರೆಗೆ ಮತ್ತು ನಂತರ 1980 ರಿಂದ 1984 ರಲ್ಲಿ ದೇಶದ ಪ್ರಧಾನಿಯಾಗಿದ್ದರು.
ಮೊರ್ಬಿ ಘಟನೆಗೆ ಕಾಂಗ್ರೆಸ್ ಸಂತಾಪ: ಮೊರ್ಬಿ ಸೇತುವೆ ಕುಸಿತದಲ್ಲಿ ಮೃತಪಟ್ಟವರಿಗೆ ನಾನು ನನ್ನ ಸಂತಾಪವನ್ನು ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಉದ್ಘಾಟನೆಯಾದ 5-6 ದಿನಗಳ ನಂತರ ಸೇತುವೆ ಹೇಗೆ ಕುಸಿದಿದೆ ಮತ್ತು ಅಲ್ಲಿಗೆ ಇಷ್ಟೊಂದು ಜನರಿಗೆ ಅವಕಾಶ ನೀಡಿದವರು ಯಾರು ಎಂದು ಪ್ರಶ್ನಿಸಿರುವ ಖರ್ಗೆ, ಪ್ರಕರಣದ ಬಗ್ಗೆ ನಿವೃತ್ತ ಎಸ್‌ಸಿ - ಎಚ್‌ಸಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ಎಲ್ಲ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಅಲ್ಲಿಗೆ ತೆರಳಿದ್ದಾರೆ. ನಾವು ಎಲ್ಲ ರೀತಿಯ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಇದರಲ್ಲಿ ರಾಜಕೀಯ ಮಾಡುತ್ತಿಲ್ಲ, ಯಾರನ್ನೂ ದೂಷಿಸಲು ಬಯಸುವುದಿಲ್ಲ ಎಂದೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನು ಓದಿ:ಮೊರ್ಬಿ ಸೇತುವೆ ದುರಂತದಲ್ಲಿ 12 ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ