ನವದೆಹಲಿ:ಇಟಲಿಯ ತಮ್ಮ ನಿವಾಸದಲ್ಲಿ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಆಗಸ್ಟ್ 27ರಂದು ನಿಧನರಾಗಿದ್ದಾರೆ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ತಮ್ಮ ಆರೋಗ್ಯ ತಪಾಸಣೆಗಾಗಿ ಹೊರ ದೇಶದಲ್ಲಿದ್ದಾರೆ. ಇವರೊಂದಿಗೆ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿಯೂ ತೆರಳಿದ್ದಾರೆ. ಆಗಸ್ಟ್ 23ರಂದು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಪಾವೊಲಾ ಮೈನೋ ಅವರನ್ನು ಸೋನಿಯಾ ಭೇಟಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಸೋನಿಯಾ ಅವರೊಂದಿಗಿರುವ ರಾಹುಲ್ ಶೀಘ್ರವೇ ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಸೆಪ್ಟೆಂಬರ್ 4ರಂದು ದೆಹಲಿಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದು, ಅಂದು ಅವರು ಭಾಷಣ ಮಾಡಲಿದ್ದಾರೆ.