ಕರ್ನಾಟಕ

karnataka

ETV Bharat / bharat

76ಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ.. ಮೇಡಂಗೆ ಜನ್ಮದಿನದ ಶುಭಕೋರಿದ ನಾಯಕರು! - 76ಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ

ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್​​ ಮಾಡಿ, ಸೋನಿಯಾ ಗಾಂಧಿ ಅವರದ್ದು ದಯೆ, ತ್ಯಾಗ, ಸಮರ್ಪಣೆ ಮತ್ತು ಧೈರ್ಯದ ವ್ಯಕ್ತಿತ್ವ. ರಾಷ್ಟ್ರ ಮತ್ತು ಪಕ್ಷಕ್ಕೆ ಅಳಿಸಲಾಗದ ಬದ್ಧತೆ ಹೊಂದಿರುವ ನಾಯಕಿ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿಜಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಹೇಳಿದ್ದಾರೆ.

Sonia Gandhi turns 76, Cong leaders extend greetings
76ಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ.. ಮೇಡಂಗೆ ಜನ್ಮದಿನದ ಶುಭಕೋರಿದ ನಾಯಕರು!

By

Published : Dec 9, 2022, 10:27 AM IST

ನವದೆಹಲಿ:ರಾಷ್ಟ್ರೀಯ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಅವರು ಇಂದು 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪಕ್ಷದ ಮುಂದಾಳು ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ನಾಯಕರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇತ್ತೀಚೆಗಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಖರ್ಗೆ ಅವರಿಂದ ಶುಭಾಶಯ:ಸಿಪಿಪಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ನನ್ನ ಆತ್ಮೀಯ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಅವರ ಅನುಗ್ರಹ, ಸಮರ್ಪಣೆಯ ಅದಮ್ಯ ಮನೋಭಾವ ಲಕ್ಷಾಂತರ ಕಾರ್ಯಕರ್ತರು, ಜನರಿಗೆ ಸ್ಫೂರ್ತಿ ನೀಡಿದೆ. ನಾನು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನೀಡಲೆಂದು ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್​​ ಮಾಡಿ, ಸೋನಿಯಾ ಗಾಂಧಿ ಅವರದ್ದು ದಯೆ, ತ್ಯಾಗ, ಸಮರ್ಪಣೆ ಮತ್ತು ಧೈರ್ಯದ ವ್ಯಕ್ತಿತ್ವ. ರಾಷ್ಟ್ರ ಮತ್ತು ಪಕ್ಷಕ್ಕೆ ಅಳಿಸಲಾಗದ ಬದ್ಧತೆ ಹೊಂದಿರುವ ನಾಯಕಿ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಹೇಳಿದ್ದಾರೆ.

ಸೋನಿಯಾ ಅವರು ತಮ್ಮ ಪುತ್ರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ರಾಜಸ್ಥಾನದ ಕೋಟಾದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಕಾಂಗ್ರೆಸ್ ಕೇಂದ್ರದಲ್ಲಿ 10 ವರ್ಷಗಳ ಕಾಲ ಆಡಳಿತ ನಡೆಸಿದ್ದು ಅತ್ಯಂತ ಗಮನಾರ್ಹ.
ಇದನ್ನು ಓದಿ:ಪ್ರಿಯಾಂಕಾ ವಾದ್ರಾಗೆ ಮೇಲುಗೈ ತಂದುಕೊಟ್ಟ ಹಿಮಾಚಲ ಪ್ರದೇಶ ಗೆಲುವು

ABOUT THE AUTHOR

...view details