ನವದೆಹಲಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಪ್ರವೇಶಿಸಲಿದ್ದಾರೆ. ಮೇ 6 ರಂದು ಹುಬ್ಬಳ್ಳಿಯಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
''ಸೋನಿಯಾ ಅವರು ಹುಬ್ಬಳ್ಳಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಅವರ ಭೇಟಿ ಕಾಂಗ್ರೆಸ್ ಪ್ರಚಾರಕ್ಕೆ ಪ್ರಮುಖ ಉತ್ತೇಜನ ನೀಡಲಿದೆ'' ಎಂದು ರಾಜ್ಯದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಈಟಿವಿ ಭಾರತಗೆ ತಿಳಿಸಿದ್ದಾರೆ.
ಶೆಟ್ಟರ್ ಸ್ಪರ್ಧಿಸಿರುವ ಕ್ಷೇತ್ರದಿಂದಲೇ ಕಹಳೆ ಊದಲಿರುವ ಸೋನಿಯಾ:ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕರ್ನಾಟಕದಲ್ಲಿ ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿಯವರ ಮೇ 6ರ ರಾಜ್ಯಕ್ಕೆ ನೀಡುವ ಭೇಟಿ ಮಹತ್ವದ್ದಾಗಿದೆ. ಹುಬ್ಬಳ್ಳಿಯಿಂದ ಲಿಂಗಾಯತ ಮುಖಂಡ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿರುವುದರಿಂದ, ಅದೇ ಸ್ಥಳವನ್ನು ಆಯ್ಕೆ ಮಾಡಿರುವುದು ಮಹತ್ವ ಪಡೆದಿದೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಎಂಜಿಎನ್‌ಆರ್‌ಇಜಿಎ, ಶಿಕ್ಷಣದ ಹಕ್ಕು ಮತ್ತು ಆಹಾರದ ಹಕ್ಕುಗಳಂತಹ ಹಲವಾರು ಅರ್ಹತಾ ಕಾನೂನುಗಳನ್ನು ಜಾರಿಗೆ ತಂದ ನಾಯಕಿ ಸೋನಿಯಾ ಗಾಂಧಿ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಅವರ ಭಾಷಣವು ಮೇ 10ರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಕಲ್ಯಾಣ ಕಾರ್ಯಕ್ಕೆ ಗಮನ ನೀಡುತ್ತದೆ. 1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಬಿಜೆಪಿಯ ವರಿಷ್ಠೆ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ್ದರಿಂದ ಪಕ್ಷದ ಮಾಜಿ ಮುಖ್ಯಸ್ಥರ ಪ್ರವೇಶವೂ ಕುತೂಹಲ ಮೂಡಿಸಿದೆ.
ತನ್ನ ತಾಯಿಯ ಪರವಾಗಿ ಪ್ರಚಾರ ಮಾಡಿದ ಪ್ರಿಯಾಂಕಾ, ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್ ವಿರುದ್ಧ ಅಲೆಯನ್ನು ತಿರುಗಿಸಲು ಸೋನಿಯಾಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಹಳೆಯ ನಾಯಕರು ನೆನಪಿಸಿಕೊಂಡರು. "ಪ್ರಿಯಾಂಕಾ ಗಾಂಧಿ ಕನ್ನಡದಲ್ಲಿ ಜನರಿಗೆ ಶುಭಾಶಯ ಕೋರಿದರು. ಉರಿಯುತ್ತಿರುವ ಬಿಸಿಲಿನಲ್ಲೇ ಭಾಷಣ ಮಾಡಿದರು" ಎಂದು ಹರಿಪ್ರಸಾದ್ ನೆನಪು ಮೆಲಕು ಹಾಕಿದರು. ಪ್ರಿಯಾಂಕಾ ಅವರಿಂದ ನಡೆಯುತ್ತಿರುವ ರ‍್ಯಾಲಿಗಳು ಮತ್ತು ರೋಡ್‌ಶೋಗಳು ಸಹ ಕಾಂಗ್ರೆಸ್‌ಗೆ ಲಾಭದಾಯಕವಾಗಿವೆ.