ಕರ್ನಾಟಕ

karnataka

ETV Bharat / bharat

ಮಹಿಳಾ ಮೀಸಲಾತಿ ಮಸೂದೆ 'ಅಪ್ನಾ ಹೈ': ಸೋನಿಯಾ ಗಾಂಧಿ - ಸಂಸತ್ತಿನ ವಿಶೇಷ ಅಧಿವೇಶ

'ಮಹಿಳಾ ಮೀಸಲಾತಿ ಮಸೂದೆ' ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ 'ಇದು ನಮ್ಮದು (ಅಪ್ನಾ ಹೈ)' ಎಂದರು.

Sonia Gandhi
ಸೋನಿಯಾ ಗಾಂಧಿ

By ANI

Published : Sep 19, 2023, 12:09 PM IST

ನವದೆಹಲಿ: ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ 'ಮಹಿಳಾ ಮೀಸಲಾತಿ ಮಸೂದೆ' ಮಂಡನೆಯಾಗಬಹುದು ಎಂಬ ಸುದ್ದಿಗಳ ನಡುವೆ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ 'ಈ ಮಸೂದೆ ನಮ್ಮದು' ಎಂದು ಹೇಳಿದರು.

ವಿಶೇಷ ಅಧಿವೇಶ ನಿನ್ನೆಯಿಂದ (ಸೋಮವಾರ) ಆರಂಭವಾಗಿದೆ. ಇಂದಿನಿಂದ ಹೊಸ ಸಂಸತ್‌ ಭವನದಲ್ಲಿ ಕಲಾಪಗಳು ನಡೆಯಲಿವೆ. ಹೊಸ ಸಂಸತ್‌ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇಂದು ಕಲಾಪದಲ್ಲಿ ಪಾಲ್ಗೊಳ್ಳಲು ಸಂಸತ್ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, 'ಇದು ನಮ್ಮದು' ಎಂದರು.

'ವಿವರಗಳಿಗಾಗಿ ಕಾಯುತ್ತಿದ್ದೇವೆ': 'ಮಹಿಳಾ ಮೀಸಲಾತಿ ಮಸೂದೆಯನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ಮಸೂದೆಯ ವಿವರಗಳಿಗಾಗಿ ಕಾಯುತ್ತಿದ್ದೇವೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಲಾಪದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ಮಂಡಿಸಿದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ಮಾ.9, 2010 ರಂದು ಅಂದಿನ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಲೋಕಸಭೆಯಲ್ಲಿ ಈ ವಿಷಯ ಕೈಗೆತ್ತಿಕೊಳ್ಳುವಲ್ಲಿ ವಿಫಲವಾಗಿತ್ತು. ಅಧಿಕೃತ ಮೂಲಗಳ ಪ್ರಕಾರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನವನ್ನು ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

ಇದು ಕಾಂಗ್ರೆಸ್‌ನ ಮಸೂದೆ: ಮಹಿಳಾ ಮೀಸಲಾತಿ ಮಸೂದೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಹಿಳಾ ಮೀಸಲಾತಿ ಮಸೂದೆಯ ಬೇಡಿಕೆಯನ್ನು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಮತ್ತು ಸೋನಿಯಾ ಗಾಂಧಿ ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚೌಧರಿ, "ಮಹಿಳಾ ಮೀಸಲಾತಿ ಮಸೂದೆಯನ್ನು ಆದಷ್ಟು ಬೇಗ ಅಂಗೀಕರಿಸಬೇಕೆಂದು ನಾವು ಬಯಸುತ್ತೇವೆ. ಇದಕ್ಕೆ ತುಂಬಾ ಸಮಯ ತೆಗೆದುಕೊಂಡಿದೆ. ಆದರೆ ಇದನ್ನು ಪರಿಚಯಿಸಿದರೆ ನಾವು ಸಂತೋಷಪಡುತ್ತೇವೆ" ಎಂದಿದ್ದಾರೆ.

ಚುನಾವಣೆಗೆ ಮುನ್ನ ಮಸೂದೆ ನೆನಪಾಯಿತೇ?:ಇದು ಕಾಂಗ್ರೆಸ್‌ನ ಮಸೂದೆ. ನಾವು ಅದನ್ನು ಮಾ. 9, 2010 ರಂದು ಪರಿಚಯಿಸಿದ್ದೇವೆ. ಆದರೆ ಬಿಜೆಪಿ 9 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದೆ. ಆದರೆ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿ ಮಸೂದೆ ಏಕೆ ನೆನಪಾಯಿತು? ಎಂದು ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ಪ್ರಶ್ನಿಸಿದ್ದಾರೆ. ಈ ಮಸೂದೆ ಇಂದು ಮಂಡನೆಗೆ ಬಂದರೆ, ನಾವು ಅದನ್ನು ಸ್ವಾಗತಿಸುತ್ತೇವೆ. ಏಕೆಂದರೆ ಸದನ ಮತ್ತು ವಿಧಾನಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂದು ಎಲ್ಲರೂ ಒಪ್ಪುತ್ತಾರೆ ಎಂದರು.

ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿಡುತ್ತದೆ. ಲಿಂಗ ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಡಳಿತದ ಕಡೆಗೆ ನಿರ್ಣಾಯಕ ಹೆಜ್ಜೆಯಾಗಿದೆ.

ಇದನ್ನೂ ಓದಿ:ಮಹಿಳಾ ಮೀಸಲಾತಿ ಪರ ಕಾಂಗ್ರೆಸ್​ ಬ್ಯಾಟಿಂಗ್​.. ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರಕ್ಕೆ ಆಗ್ರಹ

ABOUT THE AUTHOR

...view details