ಕರ್ನಾಟಕ

karnataka

ETV Bharat / bharat

ಕೋವಿಡ್​ ಬಿಕ್ಕಟ್ಟು: ಕಾಂಗ್ರೆಸ್​ ಆಡಳಿತ ರಾಜ್ಯಗಳ ಸಿಎಂಗಳ ಜೊತೆ ಸೋನಿಯಾ ಚರ್ಚೆ

ಇಂದು ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸೋನಿಯಾ ಗಾಂಧಿ ಅವರು ಆಯಾ ರಾಜ್ಯಗಳಲ್ಲಿನ ಕೋವಿಡ್​-19 ಸ್ಥಿತಿಗತಿ ಕುರಿತು ಚರ್ಚಿಸಲು ಸಭೆ ನಡೆಸುತ್ತಿದ್ದಾರೆ.

By

Published : Apr 10, 2021, 11:23 AM IST

sonia
ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸಿದ್ದು, ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ರಾಜ್ಯಗಳಲ್ಲಿನ ಕೋವಿಡ್​-19 ಸ್ಥಿತಿಗತಿಯನ್ನು ಪರಿಶೀಲಿಸಲಾಗುವುದು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೈ ನಾಯಕಿ ಸೂಕ್ತ ಸಲಹೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕೊರೊನಾರ್ಭಟ: ನಿನ್ನೆ ಒಂದೇ ದಿನ 1.45 ಲಕ್ಷ ಕೇಸ್​ ಪತ್ತೆ.. 794 ಜನರು ಬಲಿ

ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಪಂಜಾಬ್​, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಛತ್ತೀಸ್​ಗಢ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೋವಿಡ್​ ಲಸಿಕೆಯ ಅಭಾವವಿದ್ದು, ಈ ಬಗ್ಗೆ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಸಭೆ ನಡೆಸುತ್ತಿದ್ದಾರೆ.

ನಮ್ಮ ದೇಶದಲ್ಲೇ ಲಸಿಕೆಯ ಕೊರತೆ ಇರುವಾಗ 6 ಕೋಟಿಗೂ ಹೆಚ್ಚು ಡೋಸ್​ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ನಡೆಸುತ್ತಿರುವ ಭಾರತದಲ್ಲಿ 3 ತಿಂಗಳಲ್ಲಿ ಶೇ.1ಕ್ಕಿಂತ ಕಡಿಮೆ ಜನಸಂಖ್ಯೆಗೆ ಮಾತ್ರ ವ್ಯಾಕ್ಸಿನ್​ ನೀಡಿದ್ದೇವೆ. ಶೀಘ್ರವಾಗಿ ಅಗತ್ಯವಿರುವ ಎಲ್ಲರಿಗೂ ಲಸಿಕೆ ಲಭಿಸುವಂತೆ ಪತ್ರದಲ್ಲಿ ಮೋದಿಗೆ ರಾಗಾ ಒತ್ತಾಯಿಸಿದ್ದರು.

ABOUT THE AUTHOR

...view details