ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮುಂದಿನ ಐದು ವರ್ಷಗಳಲ್ಲಿ ಪಶ್ಚಿಮ ಬಂಗಾಳವನ್ನು 'ಬಂಗಾರದ ಬಂಗಾಳ' (ಸೋನಾರ್ ಬಾಂಗ್ಲಾ)ವನ್ನಾಗಿ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ತಿಳಿಸಿದ್ದು, ಕೋಲ್ಕತ್ತಾದಿಂದ 'ಸೋನಾರ್ ಬಾಂಗ್ಲಾ' ಅಭಿಯಾನ ಆರಂಭಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಕೋಲ್ಕತ್ತಾ 'ಸಿಟಿ ಆಫ್ ಜಾಯ್' ಆಗಿ ಉಳಿಯಲಿದ್ದು, ಅದನ್ನು 'ಸಿಟಿ ಆಫ್ ಫ್ಯೂಚರ್' ಆಗಿ ಪರಿವರ್ತಿಸಲು ನಾವು ಕೆಲಸ ಮಾಡುತ್ತೇವೆ. ಮೂಲಸೌಕರ್ಯ ವೃದ್ಧಿಗಾಗಿ 22,000 ಕೋಟಿ ರೂ. 'ಕೋಲ್ಕತ್ತಾ ಅಭಿವೃದ್ಧಿ ನಿಧಿ' ಸ್ಥಾಪಿಸಲಿದ್ದೇವೆ ಎಂದು ಶಾ ತಿಳಿಸಿದರು.