ಮಹಾರಾಷ್ಟ್ರ: ಸೋನಾಲಿ ಮಾಂಡ್ಲಿಕ್ ಅವರು 'ಖೇಲೋ ಇಂಡಿಯಾ' ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ದಿಟ್ಟೆ. ಸೋನಾಲಿ ಓರ್ವ ಕುಸ್ತಿಪಟು. ಒಮ್ಮೆ ಬಿಗಿಪಟ್ಟು ಹಿಡಿದರೆ, ಅದು ಚಕ್ರವ್ಯೂಹದಂತೆ ಬಾಸವಾಗುವುದು ಶತಸಿದ್ಧ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಸೋನಾಲಿ ಬಯಸುತ್ತಾರೆ. ಆದರೆ ಇವರ ಸಾಧನೆಗೆ ಬಡತನ ಬ್ರೇಕ್ ಹಾಕುತ್ತಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಘೋಷಿಸಿದ್ದ ಲಾಕ್ಡೌನ್ನಿಂದ, ಅವಳ ಅಭ್ಯಾಸದ ಮೇಲೆ ಪರಿಣಾಮ ಬೀರಿದೆ. ಆ ಸಮಯದಲ್ಲಿ ಎಲ್ಲ ಅಭ್ಯಾಸ ಕೇಂದ್ರಗಳು ಮುಚ್ಚಿದ್ದವು. ಇನ್ನು ಬಡತನದಲ್ಲಿಯೂ ಮಗಳ ಕನಸಿಗೆ ಸಾಥ್ ನೀಡಿದ್ದಾರೆ ತಂದೆ. ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಅವರಂತೆಯೇ, ಸೋನಾಲಿಯ ತಂದೆ ತಮ್ಮ ಕೃಷಿ ಪ್ರದೇಶದಲ್ಲಿ ಕುಸ್ತಿ ರಂಗವನ್ನು ನಿರ್ಮಿಸಿ ಮಗಳ ತರಬೇತಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.