ಕರ್ನಾಟಕ

karnataka

ETV Bharat / bharat

ಇಷ್ಟದ ತರಕಾರಿ ಅಡುಗೆ ಮಾಡಿಲ್ಲ ಎಂದು ತಾಯಿಯನ್ನೇ ಕೊಂದ ಮಗ - son killed own mother

ಇಷ್ಟದ ತರಕಾರಿ ಅಡುಗೆ ಮಾಡಿಲ್ಲ ಎಂದು ಮಗನೊಬ್ಬ ತನ್ನ ತಾಯಿಯನ್ನೇ ಮನೆಯ ಛಾವಣಿಯಿಂದ ತಳ್ಳಿದ ಆಘಾತಕಾರಿ ಘಟನೆ ಲೂಧಿಯಾನದಲ್ಲಿ ನಡೆದಿದೆ.

son killed mother
ಇಷ್ಟದ ತರಕಾರಿ ಅಡುಗೆ ಮಾಡಿಲ್ಲವೆಂದು ತಾಯಿಯನ್ನೇ ಕೊಂದ ಮಗ

By

Published : Oct 19, 2022, 11:58 AM IST

ಲೂಧಿಯಾನ /ಪಂಜಾಬ್​: ತಾಯಿಯ ತ್ಯಾಗಕ್ಕೆ ಸಮವಿಲ್ಲ, ಆಕೆಯ ಪ್ರೀತಿಗೆ ಸರಿಸಾಟಿಯಿಲ್ಲ ಎಂಬ ಮಾತಿದೆ. ಆದರೆ, ಇಲ್ಲೊಬ್ಬ ಮಗ ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿಯನ್ನೇ ಮನೆಯ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಲೂಧಿಯಾನ ಜಿಲ್ಲೆಯ ನ್ಯೂ ಅಶೋಕ್ ನಗರದಲ್ಲಿ ಬೆಳಕಿಗೆ ಬಂದಿದೆ.

ಸುರಿಂದರ್ ಸಿಂಗ್ (26) ಅಲಿಯಾಸ್ ಟಿಂಕು ತಾಯಿ ಕೊಂದ ಕಿಡಿಗೇಡಿ. ಚರಂಜಿತ್ ಮೃತ ತಾಯಿ. ಮಾಹಿತಿ ಪ್ರಕಾರ, ಮಧ್ಯಾಹ್ನದ ಊಟಕ್ಕೆ ತನ್ನ ನೆಚ್ಚಿನ ತರಕಾರಿಯನ್ನ ಅಡುಗೆ ಮಾಡಿಲ್ಲ ಎಂದು ಕೋಪಗೊಂಡು ಸ್ವಂತ ತಾಯಿಯನ್ನ ಥಳಿಸಿ, ಮನೆಯ ಛಾವಣಿಯಿಂದ ಕೆಳಗೆ ತಳ್ಳಿದ್ದಾನೆ. ಈ ವೇಳೆ ಪತ್ನಿ ರಕ್ಷಿಸಲು ಬಂದ ತಂದೆಗೂ ಸಹ ಟಿಂಕು ಕಬ್ಬಿಣದ ರಾಡ್​ನಿಂದ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ನಿರುದ್ಯೋಗಿಯಾಗಿದ್ದಾನೆ.

ಇದನ್ನೂ ಓದಿ:ತಾಯಿಯನ್ನು ಚಾಕುವಿನಿಂದ ಇರಿದು ಕೊಂದ ಇಂಜಿನಿಯರ್‌ ಪುತ್ರ!: ಅಮಾನವೀಯ ಕೃತ್ಯದ ವಿಡಿಯೋ

ಚರಂಜಿತ್ ಮೃತದೇಹವನ್ನು ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಂಬಂಧಿಕರು ಆರೋಪಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಸೇಲಂ ತಬರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details