ಕರ್ನಾಟಕ

karnataka

ETV Bharat / bharat

ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ - ಆಂಧ್ರದಲ್ಲಿ ಮೃತದೇಹದೊಂದಿಗೆ ಬಾಲಕ

ಶುಕ್ರವಾರದಂದು ಶ್ಯಾಮ್ ಕಿಶೋರ್​ ತನ್ನ ಚಿಕ್ಕಪ್ಪ ದುರ್ಗಾಪ್ರಸಾದ್​ಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾನೆ. ಈ ವೇಳೆ ದುರ್ಗಾಪ್ರಸಾದ್ ಸ್ಥಳಕ್ಕೆ ಬಂದು ನೋಡಿದಾಗ ರಾಜ್ಯಲಕ್ಷ್ಮಿ ಮೃತಪಟ್ಟಿರುವುದು ತಿಳಿದು ಬಂದಿದೆ..

Son stays with mother's dead body for 4 days presuming 'she was sleeping'
ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ

By

Published : Mar 12, 2022, 12:14 PM IST

Updated : Mar 12, 2022, 12:47 PM IST

ಚಿತ್ತೂರು, ಆಂಧ್ರಪ್ರದೇಶ : ಹತ್ತು ವರ್ಷದ ಬಾಲಕನೋರ್ವ ತನ್ನ ತಾಯಿ ನಿದ್ರೆ ಮಾಡುತ್ತಿದ್ದಾಳೆ ಎಂದು ಭಾವಿಸಿ ಮೃತ ದೇಹದೊಂದಿಗೆ ನಾಲ್ಕು ದಿನ ಕಳೆದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ತಿರುಪತಿ ಸಮೀಪದ ವಿದ್ಯಾನಗರದಲ್ಲಿ ನಡೆದಿದೆ.

ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ರಾಜ್ಯಲಕ್ಷ್ಮಿ ಎಂಬುವರು ಮೃತ ಮಹಿಳೆ. ಎರಡು ವರ್ಷಗಳ ಹಿಂದೆ ಪತಿಯೊಂದಿಗೆ ಜಗಳವಾಗಿ ತಿರುಪತಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆಕೆಯೊಂದಿಗೆ ಪುತ್ರ ಶ್ಯಾಮ್ ಕಿಶೋರ್ ಕೂಡ ಇದ್ದು, 5ನೇ ತರಗತಿಯಲ್ಲಿ ಓದುತ್ತಿದ್ದ.

ಇದೇ ತಿಂಗಳ 8ರಂದು ರಾಜ್ಯಲಕ್ಷ್ಮಿ ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿದ್ದರು. ಆದರೆ, ಆಕೆ ನಿದ್ರಿಸುತ್ತಿದ್ದಾಳೆ ಎಂದುಕೊಂಡಿದ್ದ ಪುತ್ರ ಕಿಶೋರ್ ನಾಲ್ಕು ದಿನಗಳ ಕಾಲ ಮೃತದೇಹದ ಜೊತೆಯಲ್ಲಿಯೇ ಇದ್ದಾನೆ. ಶಾಲೆಯಿಂದ ಬಂದ ನಂತರ ಮನೆಯಲ್ಲಿಯೇ ಇದ್ದ ತಿಂಡಿ ತಿಂದು, ಪಕ್ಕದಲ್ಲಿಯೇ ಮಲಗುತ್ತಿದ್ದನು ಎಂದು ತಿಳಿದು ಬಂದಿದೆ.

ತಾಯಿ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ

ಇದನ್ನೂ ಓದಿ:ಬೆಂಗಳೂರಿನಲ್ಲಿದ್ದುಕೊಂಡು ನಕಲಿ ದಾಖಲೆ ಸೃಷ್ಟಿಸಿ ರೋಹಿಂಗ್ಯಾಗಳನ್ನು ಭಾರತದೊಳಗೆ ಸೇರಿಸುತ್ತಿದ್ದ ವ್ಯಕ್ತಿ ಸೇರಿ 6 ಮಂದಿ ಬಂಧನ

ಶುಕ್ರವಾರದಂದು ಶ್ಯಾಮ್ ಕಿಶೋರ್​ ತನ್ನ ಚಿಕ್ಕಪ್ಪ ದುರ್ಗಾಪ್ರಸಾದ್​ಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾನೆ. ಈ ವೇಳೆ ದುರ್ಗಾಪ್ರಸಾದ್ ಸ್ಥಳಕ್ಕೆ ಬಂದು ನೋಡಿದಾಗ ರಾಜ್ಯಲಕ್ಷ್ಮಿ ಮೃತಪಟ್ಟಿರುವುದು ತಿಳಿದು ಬಂದಿದೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶ್ಯಾಮ್ ಕಿಶೋರ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ದುರ್ಗಾ ಪ್ರಸಾದ್ ಹೇಳಿದ್ದಾರೆ.

Last Updated : Mar 12, 2022, 12:47 PM IST

ABOUT THE AUTHOR

...view details