ತಿರುಪ್ಪೂರು(ತಮಿಳುನಾಡು): ಜಿಲ್ಲೆಯಲ್ಲಿ ಉದ್ಯಮಿ ಈಶ್ವರ ಮೂರ್ತಿ ಎಂಬುವರ ಪುತ್ರ ಶಿವಪ್ರದೀಪ್(25) ಎಂಬ ಯುವಕನನ್ನು ಅಪರಿಚಿತ ಗ್ಯಾಂಗ್ ವೊಂದು ಕಿಡ್ನಾಪ್ ಮಾಡಿತ್ತು. ಆತನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮೂರು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿತ್ತು.
ಅಪಹರಣಕಾರರ ಬೆದರಿಕೆಗೆ ಹೆದರಿದ ಪೋಷಕರು, ಮೂರು ಕೋಟಿ ರೂಪಾಯಿ ನೀಡಿ ಮಗನನ್ನು ರಕ್ಷಿಸಿಕೊಂಡಿದ್ದಾರೆ. ಮಗನನ್ನು ಮನೆಗೆ ಕರೆದುಕೊಂಡು ಬಂದ ಬಳಿಕ ಈಶ್ವರಮೂರ್ತಿ, ಕಿಡ್ನಾಪರ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದರು.