ಕರ್ನಾಟಕ

karnataka

ETV Bharat / bharat

ತಾಯಿ ಶವ ಮನೆಯಲ್ಲಿ.. ಮಗನ ವಿವಾಹ ದೇವಸ್ಥಾನದಲ್ಲಿ.. ವಿಚಿತ್ರ ಮದುವೆ!!

ಸಾವಿನ ನಂತರ ಮಗ ಓಂ ತಾಯಿಯ ಮೃತ ದೇಹವನ್ನು ಮನೆಗೆ ತಂದಿದ್ದಾನೆ. ಮೃತದೇಹವನ್ನು ಮನೆಯಲ್ಲಿಯೇ ಇಟ್ಟು ಸಮೀಪದ ಶಿವ ದೇವಸ್ಥಾನದಲ್ಲಿ ಓಂ ಸರೋಜಾಳನ್ನು ವಿವಾಹವಾಗಿದ್ದಾನೆ. ದೇವಸ್ಥಾನದಲ್ಲಿ ಜನಸಾಗರವೇ ನೆರೆದಿತ್ತು.

ತಾಯಿ ಶವ ಮನೆಯಲ್ಲಿ.. ಮಗನ ವಿವಾಹ ದೇವಸ್ಥಾನದಲ್ಲಿ.. ವಿಚಿತ್ರ ಮದುವೆ!!
son-married-in-temple-by-keeping-mother-dead-body-at-home-in-dhanbad

By

Published : Jul 9, 2022, 2:36 PM IST

Updated : Jul 9, 2022, 4:51 PM IST

ಧನಬಾದ್ (ಬಿಹಾರ): ಅತ್ಯಂತ ಅಚ್ಚರಿಗೊಳಿಸುವ ಹಾಗೂ ಅದೇ ಸಮಯಕ್ಕೆ ಆತಂಕ ಮೂಡಿಸುವ ಘಟನೆಯೊಂದು ಇಲ್ಲಿನ ಕೇಂದು ಆಡೀಹ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲೀಚಕ್ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಓಂ ಕುಮಾರ್ ಎಂಬ ಯುವಕ ತಾಯಿ ಶವವನ್ನು ಮನೆಯಲ್ಲಿ ಬಿಟ್ಟು ತಾನು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಇಂಥದೊಂದು ವಿಚಿತ್ರ ಮದುವೆ ಧನ್​ಬಾದ್​ನಲ್ಲಿ ನಡೆದಿದೆ.

ತಾಯಿ ಶವ ಮನೆಯಲ್ಲಿ ಮಗನ ವಿವಾಹ ದೇವಸ್ಥಾನದಲ್ಲಿ

ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಲು, ತಾಯಿಯ ಶವವನ್ನು ಮನೆಯಲ್ಲೇ ಬಿಟ್ಟು ಮಗ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಮದುವೆಯ ಬಳಿಕ ಮನೆಯಲ್ಲಿದ್ದ ತಾಯಿಯ ಮೃತದೇಹದ ಪಾದ ಸ್ಪರ್ಶಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.

ಮಾಹಿತಿಯ ಪ್ರಕಾರ, ಬಿಸಿಸಿಎಲ್ ಉದ್ಯೋಗಿ ಬೈಜನಾಥ್ ತುರಿ ಅವರ ಪುತ್ರ ಓಂ ಕುಮಾರ್ ಅವರ ವಿವಾಹವನ್ನು ಬೊಕಾರೊ ಪೆಟಾರ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಉತಾಸಾರಾ ನಿವಾಸಿ ಮನೋಜ್ ತುರಿಯ ಪುತ್ರಿ ಸರೋಜ್ ತುರಿಯೊಂದಿಗೆ ನಿಶ್ಚಯಿಸಲಾಗಿತ್ತು. ಜುಲೈ 10 ರಂದು ಇಬ್ಬರೂ ವಿಜೃಂಭಣೆಯಿಂದ ಮದುವೆಯಾಗಬೇಕಿತ್ತು.

ಆದರೆ, ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಓಂ ಅವರ ತಾಯಿ ಗುರುವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಾವಿನ ನಂತರ ಮಗ ಓಂ ತಾಯಿಯ ಮೃತ ದೇಹವನ್ನು ಮನೆಗೆ ತಂದಿದ್ದಾನೆ. ಮೃತದೇಹವನ್ನು ಮನೆಯಲ್ಲಿಯೇ ಇಟ್ಟು ಸಮೀಪದ ಶಿವ ದೇವಸ್ಥಾನದಲ್ಲಿ ಓಂ ಸರೋಜಳನ್ನು ವಿವಾಹವಾಗಿದ್ದಾನೆ. ದೇವಸ್ಥಾನದಲ್ಲಿ ಜನಸಾಗರವೇ ನೆರೆದಿತ್ತು.

ಮದುವೆಯಾದ ನಂತರ ಓಂ ತನ್ನ ಪತ್ನಿ ಸರೋಜಳೊಂದಿಗೆ ಮನೆಗೆ ಬಂದಿದ್ದಾನೆ. ನಂತರ ಓಂ ಮತ್ತು ಪತ್ನಿ ಸರೋಜ ಮನೆಯಲ್ಲಿದ್ದ ತಾಯಿಯ ಪಾರ್ಥಿವ ಶರೀರದ ಪಾದಗಳನ್ನು ಎತ್ತಿ ತಲೆಯ ಮೇಲೆ ಇಟ್ಟು ಆಶೀರ್ವಾದ ಪಡೆದರು. ಇದರ ನಂತರ, ತೇಲಮಚ್ಚೋ ಸ್ಮಶಾನದಲ್ಲಿ ಓಂ ತನ್ನ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾನೆ.

ತನ್ನ ಚಿತೆ ಏಳುವ ಮುನ್ನ ಮಗನ ಮದುವೆಯಾಗಬೇಕೆಂಬುದು ಆ ತಾಯಿಯ ಆಸೆಯಾಗಿತ್ತಂತೆ. ಅದನ್ನೀಗ ಚಾಚೂ ತಪ್ಪದೆ ಪೂರೈಸಿದ್ದಾನೆ ಮಗ ಓಂ ಕುಮಾರ್.

ಇದನ್ನು ಓದಿ:ಪತಿಯ ಮೃತದೇಹ ಮನೆಯಲ್ಲೇ ಬಿಟ್ರು.. ಆಸ್ತಿಗಾಗಿ ತಹಶೀಲ್ದಾರ್​ ಕಚೇರಿಗೆ ದೌಡಾಯಿಸಿದ ಪತ್ನಿಯರು!

Last Updated : Jul 9, 2022, 4:51 PM IST

ABOUT THE AUTHOR

...view details