ಆಗ್ರಾ (ಉತ್ತರ ಪ್ರದೇಶ): ಕೊರೊನಾ ಭೀತಿಯಿಂದ ಮಗನೊಬ್ಬ ಹೆತ್ತ ತಾಯಿಯನ್ನೇ ಕೋಣೆಯೊಳಗೆ ಕೂಡಿ ಹಾಕಿದ್ದ ಘಟನೆ ಆಗ್ರಾ ಜಿಲ್ಲೆಯ ಕಮಲಾ ನಗರದಲ್ಲಿ ನಡೆದಿದೆ.
ವೃದ್ಧ ಮಹಿಳೆಯ ಪತಿ ಇತ್ತೀಚೆಗೆ ಕೋವಿಡ್ನಿಂದ ಮೃತಪಟ್ಟಿದ್ದರು. ಪತಿಯ ಅಂತಿಮ ವಿಧಿವಿಧಾನ ಮುಗಿಸಿ ಮನೆಗೆ ಹಿಂದಿರುಗಿದಾಗ ಆಕೆಯ ಮಗ ರಾಕೇಶ್ ಅಗರ್ವಾಲ್, ಒಂದು ಕೋಣೆಯೊಳಗೆ ಕೂಡಿ ಹಾಕಿ ಬೀಗ ಹಾಕಿದ್ದಾನೆ. ಬಳಿಕ ರಾಕೇಶ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಯಾರಿಗೂ ತಿಳಿಯದ ಹಾಗೆ ಮನೆ ತೊರೆದಿದ್ದಾನೆ. ಈ ವಿಷಯ ತಿಳಿದ ಮಹಿಳೆಯ ಮೊಮ್ಮಗ ಅನುಪ್ ಗರ್ಗ್ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಅಜ್ಜಿಯನ್ನು ರಕ್ಷಿಸಿದ್ದಾನೆ. ಜೊತೆಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.