ಕರ್ನಾಟಕ

karnataka

ETV Bharat / bharat

ಮಕ್ಕಳ ಮೇಲೆ ವಾಮಾಚಾರದ ಶಂಕೆ.. ಊಟ ಮಾಡುತ್ತಿದ್ದ ಚಿಕ್ಕಪ್ಪ-ಚಿಕ್ಕಮ್ಮಳನ್ನು ಕೊಚ್ಚಿ ಕೊಲೆ ಮಾಡಿದ ಮಗ! - ಜಾರ್ಖಂಡ್​ನಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೊಲೆ

ದಂಪತಿಯ ಮಾಟಮಂತ್ರ ಕುರಿತು ಶುಕ್ರವಾರ ನಡೆದ ಪಂಚಾಯತ್‌ನಲ್ಲಿ ರವೀಂದ್ರ ಆರೋಪಿಸಿದ್ದಾನೆ. ಇಬ್ಬರೂ ಮಾಟಗಾರರು. ಇವರಿಬ್ಬರೂ ತಂತ್ರಗಳ ಸಹಾಯದಿಂದ ನನ್ನ ಮಗ ಸೇರಿದಂತೆ ಇತರ ಜನರಿಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದನು. ಆದ್ರೆ, ಈ ಆರೋಪವನ್ನು ಪಂಚಾಯತ್‌ ಸಭೆ ತಳ್ಳಿ ಹಾಕಿತ್ತು. ಅವರ ವಿರುದ್ಧ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ..

Son kills uncle and aunt on suspicion of black magic in Jharkhand  double murder in gumla  Uncle and Aunt murder in Jharkhand  Jharkhand crime news  ಜಾರ್ಖಂಡ್​ನಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕೊಲೆ ಮಾಡಿದ ಮಗ  ಗುಮ್ಲಾದಲ್ಲಿ ಡಬಲ್​ ಮರ್ಡರ್​ ಜಾರ್ಖಂಡ್​ನಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೊಲೆ  ಜಾರ್ಖಂಡ್​ ಅಪರಾಧ ಸುದ್ದಿ
ಊಟ ಮಾಡುತ್ತಿದ್ದ ಚಿಕ್ಕಪ್ಪ-ಚಿಕ್ಕಮ್ಮಳನ್ನು ಕೊಚ್ಚಿ ಕೊಲೆ ಮಾಡಿದ ಮಗ

By

Published : Apr 23, 2022, 10:29 AM IST

ಗುಮ್ಲಾ :ತನ್ನ ಮಕ್ಕಳ ಮೇಲೆ ವಾಮಾಚಾರ ಮಾಡ್ಸಿ ಅನಾರೋಗ್ಯದಿಂದ ಬಳಲುವಂತೆ ಮಾಡುತ್ತಿದ್ದಾರೆ ಎಂಬ ಅನುಮಾನದಿಂದ ಮಗನೊಬ್ಬ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮಳನ್ನು ಕೊಡಲಿಯಿಂದ ಬರ್ಬರವಾಗಿ ಕೊಲೆ ಮಾಡಿರುವ ಚೈನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಮಾ ಭಗತ್ ಟೋಲಿಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಇಲ್ಲಿನ ನಿವಾಸಿ ರವೀಂದ್ರ ಮತ್ತು ಸುಮಿತ್ರಾ ದಂಪತಿಗೆ ಮುದ್ದಾದ ಮಕ್ಕಳಿವೆ. ಕಳೆದ ಹಲವು ದಿನಗಳಿಂದ ಆರೋಪಿ ರವೀಂದ್ರ ತನ್ನ ಮಕ್ಕಳ ಅನಾರೋಗ್ಯದ ಬಗ್ಗೆ ಚಿಂತಿತನಾಗಿದ್ದನು. ನನ್ನ ಚಿಕ್ಕಮ್ಮ ಫುಲ್ಮೈತ್ ದೇವಿ (60 ವರ್ಷ) ಮತ್ತು ಚಿಕ್ಕಪ್ಪ ಲುದ್ರಾ ಚಿಕ್ ಬರೈಕ್ (65 ವರ್ಷ) ತನ್ನ ಮಗುವಿಗೆ ಭೂತೋಚ್ಚಾಟನೆ ಮಾಡುವ ಮೂಲಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಅನುಮಾನ ಮೂಡಿದೆ.

ಓದಿ:ರಾಯಚೂರು ನ್ಯಾಯಾಲಯದ ಆವರಣದಿಂದಲೇ ಕೊಲೆ ಆರೋಪಿಗಳು ಪರಾರಿ!

ದಂಪತಿಯ ಮಾಟಮಂತ್ರ ಕುರಿತು ಶುಕ್ರವಾರ ನಡೆದ ಪಂಚಾಯತ್‌ನಲ್ಲಿ ರವೀಂದ್ರ ಆರೋಪಿಸಿದ್ದಾನೆ. ಇಬ್ಬರೂ ಮಾಟಗಾರರು. ಇವರಿಬ್ಬರೂ ತಂತ್ರಗಳ ಸಹಾಯದಿಂದ ನನ್ನ ಮಗ ಸೇರಿದಂತೆ ಇತರ ಜನರಿಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದನು. ಆದ್ರೆ, ಈ ಆರೋಪವನ್ನು ಪಂಚಾಯತ್‌ ಸಭೆ ತಳ್ಳಿ ಹಾಕಿತ್ತು. ಅವರ ವಿರುದ್ಧ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.

ಇದರಿಂದ ಬೇಸರಗೊಂಡಿದ್ದ ರವೀಂದ್ರ ಕೊಡಲಿ ತೆಗೆದುಕೊಂಡು ಏಪ್ರಿಲ್​ 22ರ ರಾತ್ರಿ ನೇರ ತನ್ನ ಚಿಕ್ಕಪ್ಪ-ಚಿಕ್ಕಮ್ಮ ಮನೆಗೆ ತೆರಳಿದ್ದಾನೆ. ಊಟ ಮಾಡುತ್ತಿದ್ದ ತನ್ನ ಚಿಕ್ಕಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಚಿಕ್ಕಮ್ಮಳನ್ನು ಕೊಚ್ಚಿ ಹಾಕಿದ್ದಾನೆ. ಬಳಿಕ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details