ಕರ್ನಾಟಕ

karnataka

ETV Bharat / bharat

ಲೈಟ್​ ಆನ್​ ಆಫ್​ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ - ETV Bharath Kannada news

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಮಗ - ವಿದ್ಯುತ್​ ದೀಪ ಆನ್​ ಆಫ್​ ಮಾಡಬೇಡ ಎಂದು ತಂದೆಯ ಬದ್ಧಿಮಾತು - ಕುಪಿತನಾದ ಮಗನಿಂದ ಅಪ್ಪನ ಹತ್ಯೆ

son killed his father for turning on the lights
ಮಸಾಲೆ ರುಬ್ಬುವ ಕಲ್ಲಿನಿಂದ ಪಿತೃವಿನ ಕೊಲೆ

By

Published : Jan 30, 2023, 10:34 PM IST

ಸೂರತ್​ (ಗುಜರಾತ್):​ ಸಣ್ಣಪುಟ್ಟ ಕಾರಣಗಳಿಗೆ ಕೊಲೆಗಳು ನಡೆಯುತ್ತಿರುವುದು ಈಗ ಸರ್ವೆ ಸಾಮಾನ್ಯವಾಗಿದೆ. ಬಹುತೇಕ ತಂದೆ-ಮಕ್ಕಳ ಸಂಬಂಧ ಅನ್ಯೋನ್ಯವಾಗಿದ್ದರೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಸೂರತ್​ನಲ್ಲಿ ಇದೇ ರೀತಿಯ ಭಿನ್ನಾಭಿಪ್ರಾಯ ಉಂಟಾಗಿ ತಂದೆಯ ಕೊಲೆಯಲ್ಲಿ ಅಂತ್ಯವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣ ಒಂದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗ ತಂದೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ವಿದ್ಯುತ್​ ದೀಪ ಬೆಳಗಿಸುವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗುಜರಾತ್​ನ ಸೂರತ್‌ನಲ್ಲಿ ಮಗನಿಂದಲೇ ತಂದೆಯ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಮ್ರೋಲಿ ಪ್ರದೇಶದಲ್ಲಿ ವಾಸಿಸುವ ತಂದೆಯೊಬ್ಬರು ತನ್ನ ಮಗನ ಬಳಿ ಲೈಟ್ ಆಫ್ ಮಾಡುವಂತೆ ಹೇಳಿದ್ದಕ್ಕೆ ಪುತ್ರ ತಂದೆಯ ಮೇಲೆ ಉದ್ರಿಕ್ತನಾಗಿ ಗಲಾಟೆ ಮಾಡಿದ್ದಾನೆ. ಇದಾದ ಬಳಿಕ ಸಿಟ್ಟಿಗೆದ್ದ ಮಗ ತಂದೆಯನ್ನೇ ಕೊಂದಿದ್ದಾನೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಮೂಲತಃ ಅಮ್ರೋಲಿ ಮತ್ತು ಒಡಿಶಾ ಮೂಲದ ಸವಾಯಿ ಕುಟುಂಬದ ಶಂಕರ್​ ಮುಕಬದಿರ್ ಎಂಬಾತ ಮನೆಯಲ್ಲಿ ದೀಪಗಳನ್ನು ಸ್ವಿಚ್ ಆಫ್ ಆನ್​ ಮಾಡುತ್ತಿದ್ದ. ಅಷ್ಟರಲ್ಲಿ ತಂದೆ ದೀಪವನ್ನು ಆನ್​ ಆಫ್​ ಮಾಡುತ್ತಿದ್ದಕ್ಕೆ ಬೈದಿದ್ದಾರೆ. ಇದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಬೆಳೆದಿದೆ. ತಂದೆಯ ಇಂತಹ ವರ್ತನೆ ಕಂಡು ಮಗನಿಗೂ ಕೋಪ ಎಲ್ಲೆ ಮೀರಿದೆ. ಆತ ತನ್ನ ತಂದೆಯ ಮೇಲೆ ಮಸಾಲೆ ರುಬ್ಬುವ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಆತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ಕುರಿತು ಮಾಹಿತಿ ಪಡೆದ ಅಮ್ರೋಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ನಗರದ ಅಮ್ರೋಲಿ ಪ್ರದೇಶದ ಹರಿದರ್ಶನ್ ಸೊಸೈಟಿಯ ನಿವಾಸಿ ಗಣೇಶ್ ಸವಾಯಿ ಎಂಬುವವರು ತಮ್ಮ ಎರಡು ಮಕ್ಕಳೊಂದಿಗೆ ವಾಸವಾಗಿದ್ದರು. ಗಣೇಶ್ ಸವಾಯಿ ಅವರು ಮೂಲತಃ ಒಡಿಶಾದವರಾಗಿದ್ದು, ಗುಜರಾತ್​ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೊದಲ ಮಗ ವಜ್ರದ ಕೆಲಸ ಮಾಡುತ್ತಿದ್ದರು. ಎರಡನೇ ಮಗನ ಹೆಸರು ಶಂಕರ್​ ಮುಕಬದಿರ್​ ಎಂದು ತಿಳಿದುಬಂದಿದೆ.

ಶಂಕರ್​ ಮುಕಬದಿರ್ ತಂದೆಯನ್ನು ಕೊಲೆ ಮಾಡಿರುವುದು ಮೊದಲ ಮಗ ಕೆಲಸ ಮುಗಿಸಿ ಮನೆಗೆ ಬಂದಾಗ ತಂದೆ ಶವವಾಗಿ ಬಿದ್ದಿರುವುದ ಕಂಡು ಗಾಬರಿಯಾಗಿದ್ದಾರೆ. ನಂತರ ಅವರು ಪೊಲೀಸರಿಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶಂಕರ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ನೀಡಿರುವ ಪ್ರಥಮಿಕ ಮಾಹಿತಿಯಂತೆ, ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯನ್ನು ಮಸಾಲೆ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ವಿದ್ಯುತ್​ ದೀಪ ಆನ್​ ಆಫ್​ ಮಾಡುತ್ತಿದ್ದಕ್ಕೆ ಇಬ್ಬರ ನಡುವೆ ಕಲಹವಾಗಿ ಕೊಲೆಯಾಗಿದೆ. ಇದೇ ಕೊಲೆಗೆ ಮೋಟಿವ್​ ಎಂದು ಪೊಲೀಸರ ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಚ್ಚಿನ ತನಿಖೆಗಾಗಿ ಶಂಕರ್​ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಂತರ ಕೊಲೆಯ ನಿಜವಾದ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ:ಸಾಲ ತೀರಿಸಲು ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದ ಆಟೋ ಚಾಲಕನ ಬಂಧನ

ABOUT THE AUTHOR

...view details