ಕರ್ನಾಟಕ

karnataka

ETV Bharat / bharat

ಆಸ್ತಿ ವಿವಾದದಲ್ಲಿ ತಂದೆಯನ್ನು ಗುಂಡುಹಾರಿಸಿ ಕೊಂದ ಮಗ

8 ದಿನಗಳ ಹಿಂದೆಯೂ ರಂಜಿತ್ ತಂದೆಯ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಅರವಿಂದ್ ಮಂಡಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಧಮದಾಹ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಇಲ್ಲಿ ಮೃತನ ಪತ್ನಿಯ ಖಚಿತ ಹೇಳಿಕೆ ಮೇರೆಗೆ ಮಗ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..

son killed father in  bihar over land issue
ಆಸ್ತಿ ವಿವಾದದಲ್ಲಿ ತಂದೆಯನ್ನು ಗುಂಡುಹಾರಿಸಿ ಕೊಂದ ಮಗ

By

Published : Mar 25, 2022, 1:01 PM IST

Updated : Mar 25, 2022, 2:17 PM IST

ಪೂರ್ಣಿಯಾ,(ಬಿಹಾರ) :ಮಗನೋರ್ವ ತನ್ನ ತಂದೆಯನ್ನು ಗುಂಡು ಹಾರಿಸಿ ಕೊಂದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ನಡೆದಿದ್ದು, ಗಂಭೀರ ಗಾಯಕ್ಕೆ ಒಳಗಾದ ತಂದೆ, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಧಮದಾಹ ಪೊಲೀಸ್ ಠಾಣಾ ವ್ಯಾಪ್ತಿಯ ವಿಷನ್‌ಪುರ ಪಂಚಾಯತ್‌ನ ಕವೈಯಲ್‌ಗಾಂವ್‌ನಲ್ಲಿ ಘಟನೆ ನಡೆದಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದಾರೆ. ಮಾಹಿತಿ ಪ್ರಕಾರ ಮೃತ ವ್ಯಕ್ತಿಯಲ್ಲಿ ಅರವಿಂದ್ ಮಂಡಲ್ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆ ಸಂಭವಿಸಿದಾಗ ಅರವಿಂದ್ ಮಂಡಲ್ ತನ್ನ ಮನೆಯಿಂದ ಭವಾನಿಪುರಕ್ಕೆ ತೆರಳಿದ್ದರು.

ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಅರವಿಂದ್ ಮಂಡಲ್ ಅವರನ್ನು ತಡೆದು, 6 ಗುಂಡುಗಳನ್ನು ಹಾರಿಸಿದ್ದಾರೆ. ಅರವಿಂದ್ ಮಂಡಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ಜಮೀನು ವಿವಾದವೇ ಕಾರಣ ಎನ್ನಲಾಗಿದೆ.

ಆಸ್ತಿ ವಿವಾದದಲ್ಲಿ ತಂದೆಯನ್ನು ಗುಂಡುಹಾರಿಸಿ ಕೊಂದ ಮಗ

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮೃತರ ಪತ್ನಿ ಸಾವಿತ್ರಿ ದೇವಿ ತಮ್ಮ ಪತಿಯನ್ನು ಮಗ ರಂಜಿತ್ ಮಂಡಲ್ ಕೊಲೆ ಮಾಡಿದ್ದಾನೆ. ಪತಿಗೆ ಒಟ್ಟು 12 ಎಕರೆ ಜಮೀನಿದ್ದು, ಸ್ವಲ್ಪ ಜಮೀನನ್ನು ಮಗಳಿಗೆ ನೀಡಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಂಜಿತ್ ಆಗಾಗ ತನ್ನ ತಂದೆಯೊಂದಿಗೆ ಜಗಳ ಮಾಡುತ್ತಿದ್ದನು. ಮಗಳಿಗೆ ಜಮೀನು ಕೊಡುವ ವಿಚಾರಕ್ಕೆ ಸಿಟ್ಟಿಗೆದ್ದು, ತಂದೆಯನ್ನು ಮಗ ಕೊಂದಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ:ಗಂಗಾನದಿಯಲ್ಲಿ 17 ಟ್ರಕ್​​ಗಳನ್ನು​ ಹೊತ್ತು ಸಾಗುತ್ತಿದ್ದ ಕಾರ್ಗೋ ಹಡಗು ನೀರುಪಾಲು!

8 ದಿನಗಳ ಹಿಂದೆಯೂ ರಂಜಿತ್ ತಂದೆಯ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಅರವಿಂದ್ ಮಂಡಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಧಮದಾಹ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಇಲ್ಲಿ ಮೃತನ ಪತ್ನಿಯ ಖಚಿತ ಹೇಳಿಕೆ ಮೇರೆಗೆ ಮಗ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Last Updated : Mar 25, 2022, 2:17 PM IST

ABOUT THE AUTHOR

...view details