ಮನೋಹರ್ಪುರ(ಜಾರ್ಖಂಡ್):ತಾಯಿಯನ್ನು ಕೊಲೆ ಮಾಡಿರುವ ಮಗನೋರ್ವ ಮೃತದೇಹವನ್ನು ಮನೆ ಮುಂದೆ ಸುಟ್ಟು ಹಾಕಿ, ಅದಕ್ಕಾಗಿ ನಿರ್ಮಿಸಿದ್ದ ಚಿತೆಯಲ್ಲಿ ಕೋಳಿ ಬೇಯಿಸಿ ತಿಂದಿರುವ ಅಮಾನವೀಯ ಘಟನೆ ಜಾರ್ಖಂಡ್ನ ಮನೋಹರ್ಪುರದಲ್ಲಿ ನಡೆದಿದೆ.
ನಾಲ್ಕು ವರ್ಷಗಳ ಹಿಂದೆ ತಂದೆಯನ್ನು ಕೊಲೆ ಮಾಡಿ ಜೈಲುಪಾಲಾಗಿದ್ದ 35 ವರ್ಷದ ಪ್ರಧಾನ್ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ. ಇದೀಗ ತಾಯಿಯನ್ನೂ ಕೊಲೆ ಮಾಡಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಈತ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಈಗಲೂ ಕೃಷಿ ಕಾಯ್ದೆಗಳನ್ನ ಅಮಾನತಿನಲ್ಲಿಡಲು ನಾವು ಬದ್ಧ: ಪ್ರಧಾನಿ ಮೋದಿ
ಮನೋಹರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜೊಜೋಗುಟ್ ಗ್ರಾಮದಲ್ಲಿ ತಾಯಿ ಜೊತೆ ವಾಸವಾಗಿದ್ದ ಈತ ಅವಳನ್ನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಮನೆಯ ಅಂಗಳದಲ್ಲಿ ಸುಟ್ಟುಹಾಕಿದ್ದು, ಅದರ ಮೇಲೆ ಕೋಳಿ ಬೇಯಿಸಿ ತಿಂದಿದ್ದಾನೆ. ಈ ಬಗ್ಗೆ ಆರೋಪಿ ಗ್ರಾಮಸ್ಥರಿಗೆ ಗೊತ್ತಾದ ಬಳಿಕ ಆತನನ್ನ ಕಟ್ಟಿ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಂಠಪೂರ್ತಿ ಕುಡಿದ ಪ್ರಧಾನ್ ತಾಯಿ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ನಂತರ ಮನೆಯ ಮುಂದೆ ಸುಟ್ಟು ಹಾಕಿದ್ದಾನೆ. ಜೊತೆಗೆ ಕೋಳಿ ಬೇಯಿಸಿದ್ದಾನೆ. ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.