ಕರ್ನಾಟಕ

karnataka

ETV Bharat / bharat

Watch - ಮನೆಗೆ ಬೀಗ ಜಡಿದು ಹೆತ್ತಮ್ಮನನ್ನು ಬಂಧಿಯಾಗಿಸಿದ ಮಗ - ವಿಡಿಯೋ ವೈರಲ್​ - ಗಾಜಿಯಾಬಾದ್​ನ ಲೋನಿ ಪ್ರದೇಶ

ಮನೆ ಮಾರಲು ನಿರಾಕರಿಸಿದ ಅಮ್ಮನನ್ನು ಮನೆಯ ಬಾಗಿಲು ಮತ್ತು ಗೇಟ್​ಗೆ ಬೀಗ- ಸರಪಳಿ ಜಡಿದು ಬಂಧಿಯಾಗಿಸಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ.

ಹೆತ್ತಮ್ಮನನ್ನು ಬಂಧಿಯಾಗಿಸಿದ ಮಗ
ಹೆತ್ತಮ್ಮನನ್ನು ಬಂಧಿಯಾಗಿಸಿದ ಮಗ

By

Published : Oct 25, 2021, 3:54 PM IST

ಗಾಜಿಯಾಬಾದ್/ನವದೆಹಲಿ: ಮನೆಯ ಬಾಗಿಲು ಮತ್ತು ಗೇಟ್​ಗೆ ಬೀಗ- ಸರಪಳಿ ಜಡಿದು ವೃದ್ಧ ತಾಯಿಯನ್ನು ಹಿರಿಯ ಮಗ ಬಂಧಿಯಾಗಿಸಿರುವ ಹೃದಯ ವಿದ್ರಾವಕ ಘಟನೆ ಗಾಜಿಯಾಬಾದ್​ನ ಲೋನಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆ ಮನೆಯಿಂದ ಕಿರುಚಾಟದ ಶಬ್ಧ ಕೇಳಿಸಿದ್ದು, ಸ್ಥಳೀಯರು ಮನೆ ಮುಂದೆ ಬಂದಿದ್ದಾರೆ. ಇಣುಕಿ ನೋಡಿದಾಗ ಅಜ್ಜಿಯೊಬ್ಬರು ಒಳಗಡೆ ಇರುವುದು ತಿಳಿದು ಬಂದಿದೆ. ಆಕೆಯನ್ನು ಮಾತನಾಡಿಸಿದಾಗ, ತನ್ನ ಹಿರಿಯ ಮಗ ತನ್ನನ್ನು ಹೊಡೆದು, ಮನೆಯಲ್ಲಿ ಬಂಧಿಸಿರುವುದಾಗಿ, ಬಾಯಾರಿಕೆ - ಹಸಿವಿನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಕೆಲವರು ಮೊಬೈಲ್​ನಲ್ಲಿ ದೃಶ್ಯವನ್ನ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಹೆತ್ತಮ್ಮನನ್ನು ಬಂಧಿಯಾಗಿಸಿದ ಮಗ

ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಿಂದ ಬೀಗ ಒಡೆದು ವೃದ್ಧೆಯನ್ನು ಹೊರಗೆ ಕರೆತಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನು ಈ ವೃದ್ಧೆಯ ಕಿರಿಯ ಮಗ ಕೆಲ ಸಮಯದ ಹಿಂದೆ ನಿಧನರಾಗಿದ್ದು, ಹಿರಿಯ ಮಗ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ. ಲೋನಿ ಪ್ರದೇಶದಲ್ಲಿರುವ ಈ ಮನೆಯನ್ನು ಮಾರಲು ಹಾಗೂ ತಾಯಿಯನ್ನು ತನ್ನೊಂದಿಗೆ ದೆಹಲಿಗೆ ಬರಲು ಹಿರಿಯ ಮಗ ಹೇಳಿದ್ದು, ಇದಕ್ಕೆ ನಿರಾಕರಿಸಿದ್ದಕ್ಕೆ ಹೀಗೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ABOUT THE AUTHOR

...view details