ಕರ್ನಾಟಕ

karnataka

ETV Bharat / bharat

ಗೋರಖ್​ಪುರದಲ್ಲಿ ವಿಚಿತ್ರ ಘಟನೆ: ತಾಯಿಯ ಮೃತದೇಹವನ್ನು 4 ದಿನ ಬಚ್ಚಿಟ್ಟಿದ್ದ ಮಗ - ಗೋರಖ್‌ಪುರದ ಗುಲ್ರಿಹಾ ಪೊಲೀಸ್ ಠಾಣೆ

ಯುಪಿಯ ಗೋರಖ್‌ಪುರದ ಗುಲ್ರಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ತನ್ನ ತಾಯಿಯ ಮೃತದೇಹವನ್ನು ನಾಲ್ಕು ದಿನಗಳಿಂದ ಮನೆಯಲ್ಲಿಯೇ ಬಚ್ಚಿಟ್ಟು ದುರ್ವಾಸನೆ ಬಾರದಂತೆ ಪ್ರತಿನಿತ್ಯ ಅಗರಬತ್ತಿ ಹಚ್ಚುತ್ತಿದ್ದ ಎಂಬ ಸಂಗತಿ ಬಯಲಾಗಿದೆ.

ಗೋರಖ್​ಪುರ
ಗೋರಖ್​ಪುರ

By

Published : Dec 13, 2022, 10:44 PM IST

Updated : Dec 13, 2022, 10:57 PM IST

ಗೋರಖ್‌ಪುರ(ಉತ್ತರ ಪ್ರದೇಶ): ಗುಲ್ರಿಹಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಶಹಬಾಜ್‌ಗಂಜ್‌ನಲ್ಲಿ ಪುತ್ರನೊಬ್ಬ ತಾಯಿಯ ಮೃತದೇಹವನ್ನು 4 ದಿನಗಳ ಕಾಲ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಾನೆ. ಕೆಟ್ಟ ವಾಸನೆ ಬಂದಾಗ ಅಲ್ಲಿ ಅಗರಬತ್ತಿ ಹಚ್ಚುತ್ತಿದ್ದ ಎಂದು ತಿಳಿದುಬಂದಿದೆ. ಹಣದ ದುರಾಸೆಯಿಂದ ತಾಯಿಯನ್ನು ಕೊಂದು ಹೀಗೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಮಂಗಳವಾರ ದುರ್ವಾಸನೆ ಬರುತ್ತಿದ್ದಂತೆ ಸುತ್ತಮುತ್ತಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೂಲಗಳ ಪ್ರಕಾರ, ಶಿವಪುರ ಶಹಬಾಜ್‌ಗಂಜ್ ನಿವಾಸಿ ರಾಮ್ ದುಲಾರೆ ಮಿಶ್ರಾ ಬೋದರ್‌ಬಾರ್‌ನಲ್ಲಿರುವ ಇಂಟರ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ಅವರ ಪತ್ನಿ ಶಾಂತಿ ದೇವಿ (82) ಗೋರಖ್‌ಪುರದ ಸರ್ಕಾರಿ ಎಡಿ ಇಂಟರ್ ಕಾಲೇಜಿನಲ್ಲಿ ಶಿಕ್ಷಕಿ. ಇವರ ಮೃತದೇಹ ಮಂಗಳವಾರ ಅವರ ಮನೆಯ ಆಸನವೊಂದರ ಕೆಳಗೆ ಪತ್ತೆಯಾಗಿದೆ. ಪ್ರಕರಣದಲ್ಲಿ ಮಗನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಇದೇ ವೇಳೆ ಅಕ್ಕಪಕ್ಕದ ಜನರು ಶಾಂತಿ ದೇವಿ ಅವರ 45 ವರ್ಷದ ಮಗ ನಿಖಿಲ್ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ. ನಿಖಿಲ್ ಮಾದಕ ವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ತಾಯಿಯನ್ನು ಥಳಿಸುತ್ತಿದ್ದ ಎಂದು ಹೇಳಿದ್ದಾರೆ. ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ತಂದೆಯ ಹಣ ಮರು ಹೊಂದಿಸಲು ಮಗಳ ಸರ್ಕಸ್‌; ಕಿಡ್ನಿ ಮಾರಲು ಮುಂದಾಗಿ ಮೋಸದ ಜಾಲಕ್ಕೆ ಬಿದ್ದಳು!

Last Updated : Dec 13, 2022, 10:57 PM IST

ABOUT THE AUTHOR

...view details