ಕರ್ನಾಟಕ

karnataka

ETV Bharat / bharat

ತಾಯಿಗೆ ಗುಂಡಿಕ್ಕಿ ಪರಾರಿಯಾದ ಮಗ - son fired on mother and escaped in delhi

ಅಮ್ಮನ ಮೇಲೆ ಮಗ ಗುಂಡು ಹಾರಿಸಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ.

son fired on mother and escaped in delhi
ತಾಯಿಗೆ ಗುಂಡಿಕ್ಕಿ ಪರಾರಿಯಾದ ಮಗ

By

Published : Sep 2, 2021, 5:37 PM IST

ಮುಂಡ್ಕಾ (ನವದೆಹಲಿ): ಹೆತ್ತ ತಾಯಿಯ ಮೇಲೆಯೇ ಗುಂಡು ಹಾರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಮಗ ಪರಾರಿಯಾಗಿರುವ ಘಟನೆ ಪಶ್ಚಿಮ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ನಡೆದಿದೆ.

ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಆಕೆಯಿಂದ ಬೇರೆಯಿದ್ದ ಆರೋಪಿ ಸಂದೀಪ್ (35) ಇದೀಗ ಅಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. ಆತ ಕೃತ್ಯ ಎಸಗಲು ಕಾರಣವೇನೆಂಬುದು ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಪಾರ್ಟಿಗೆ ಕರೆದು ಸ್ನೇಹಿತನನ್ನೇ ಹತ್ಯೆ ಮಾಡಿ ಶವ ಹೂತಿಟ್ಟರು.. ಮೈಸೂರಲ್ಲಿ ಆರೋಪಿಗಳು ಅರೆಸ್ಟ್​​​

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮುಂಡ್ಕಾ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details