ಬುಲಂದ್ಶಹರ್ ( ಉತ್ತರ ಪ್ರದೇಶ) :ಮಗಳ ಚಿಕಿತ್ಸೆಗೆ ಹಣ ನೀಡುವಂತೆ ಕೇಳಿದಾಗ ನಿರಾಕರಿಸಿದ ತಂದೆಯನ್ನು ಮಗ ಹೊಡೆದು ಕೊಂದಿರುವ ಘಟನೆ ನಡೆದಿದೆ. ಕೊಲೆ ಆರೋಪಿ ತಲೆಮರೆಸಿಕೊಂಡಿದ್ದಾನೆ.
ತಂದೆಯನ್ನೇ ಹೊಡೆದು ಕೊಂದ ಮಗ.. ಕಾರಣ ಏನ್ ಗೊತ್ತಾ? - ಬುಲಂದ್ಶಹರ್ ಕೊಲೆ
ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಗನೇ ಹೊಡೆದು ಕೊಂದಿದ್ದಾನೆ. ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಕಮಲ್ (32) ಎಂಬಾತ ತನ್ನ ತಂದೆ 55 ವರ್ಷದ ಪ್ರಕಾಶ್ ಎಂಬುವರೊಂದಿಗೆ ಹಣ ಕೇಳಿದ್ದ. ಹಣ ನೀಡಲು ಪ್ರಕಾಶ್ ನಿರಾಕರಿಸಿದ್ದರು. ಈ ವೇಳೆ ಕಮಲ್ ಕಟ್ಟಿಗೆಯಿಂದ ತಂದೆಯ ಕಾಲಿಗೆ ಹೊಡೆದಿದ್ದಾನೆ. ನೆಲಕ್ಕೆ ಬಿದ್ದ ಪ್ರಕಾಶ್ ಅವರ ತಲೆಗೆ ತೀವ್ರ ಗಾಯವಾಗಿತ್ತು. ತಕ್ಷಣ ಅವರನ್ನು ಸಮೀಪದ ಲಕಾವತಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದೊಯ್ಯವಂತೆ ಸೂಚಿಸಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಪ್ರಕಾಶ್ ಕೊನೆಯುಸಿರೆಳೆದಿದ್ದಾರೆ.
ಬುಲಂದ್ಶಹರ್ ಜಿಲ್ಲೆಯ ಮೂಧಿ ಬಕಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಪ್ರಕಾಶ್ ಪತ್ನಿ ಮಗ ಕಮಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಕಮಲ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.