ನಾಗ್ಪುರ (ಮಹಾರಾಷ್ಟ್ರ): ತಂದೆ ಹಾಗೂ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಾಗ್ಪುರ ಜಿಲ್ಲೆಯ ಮೊಹಗಾಂವ್ ಜಿಲ್ಪಿ ಬಳಿಯ ಕೆರೆಯಲ್ಲಿ ನಡೆದಿದೆ. ಅಬ್ದುಲ್ ಆಸಿಫ್ ಶೇಖ್ (35) ಮತ್ತು ಆತನ ಪುತ್ರ ಶಹಬಿಲ್ ಶೇಖ್ (12) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು.
ನೀರಿನಲ್ಲಿ ಮುಳುಗಿ ತಂದೆ ಮಗ ಸಾವು ನೀರಿನಲ್ಲಿ ಮುಳುಗಿ ತಂದೆ ಮಗ ಸಾವು ಅಂದು ಅವರ ಕಿರಿಯ ಮಗನ ಜನ್ಮದಿನವಾಗಿತ್ತು. ಅದನ್ನು ಆಚರಿಸಲು ಅವರು ಕೆರೆಗೆ ಹೋಗಿದ್ದರು. ಮೊದಲು ತಂದೆ ಅಬ್ದುಲ್ ಈಜಲು ಕೆರೆಗೆ ಹೋಗಿದ್ದು, ಕಿರಿಯ ಮಗ ಅದನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದ.
ನೀರಿನಲ್ಲಿ ಮುಳುಗಿ ತಂದೆ ಮಗ ಸಾವು ನೀರಿನಲ್ಲಿ ಮುಳುಗಿ ತಂದೆ ಮಗ ಸಾವು ಆದರೆ ತಂದೆಗೆ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಅವನನ್ನು ಉಳಿಸಲು ಹೆಂಡತಿಯೂ ಕೆರೆಗೆ ಓಡಿದರು. ಜೊತೆಗೆ ತಾಯಿಯನ್ನು ಹಿಂಬಾಲಿಸಿ ಮಗ ಶಹಬಿಲ್ ಕೂಡ ಕೆರೆಗೆ ಹೋಗಿದ್ದಾನೆ.
ನೀರಿನಲ್ಲಿ ಮುಳುಗಿ ತಂದೆ ಮಗ ಸಾವು ನೀರಿನಲ್ಲಿ ಮುಳುಗಿ ತಂದೆ ಮಗ ಸಾವು ಆದರೆ ದುರಾದೃಷ್ಟವಶಾತ್, ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿ ನಿಧನರಾಗಿದ್ದಾರೆ. ಕೆರೆಯ ಬಳಿ ಇದ್ದ ಜನರು ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೀರಿನಲ್ಲಿ ಮುಳುಗಿ ತಂದೆ ಮಗ ಸಾವು