ವಿಶಾಖಪಟ್ಟಣಂ (ಆಂಧ್ರಪ್ರದೇಶ) :ಬಾಂಗ್ಲಾದೇಶ ನೌಕಾಪಡೆಯ ಹಡಗು (BNS) ಸೋಮುದ್ರ ಅವಿಜಾನ್ ಪೂರ್ವ ನೌಕಾ ಕಮಾಂಡ್ (ENC)ಗೆ ನಾಲ್ಕು ದಿನಗಳ ಭೇಟಿಗಾಗಿ ವಿಶಾಖಪಟ್ಟಣಂಗೆ ಆಗಮಿಸಿದೆ.
ಹಡಗನ್ನು ಇಎನ್‌ಸಿ ಮತ್ತು ಈಸ್ಟರ್ನ್ ಫ್ಲೀಟ್‌ನ ಅಧಿಕಾರಿಗಳು ಸ್ವಾಗತಿಸಿದರು. ಬಾಂಗ್ಲಾದೇಶ ನೌಕಾಪಡೆಯ ಈ ಭೇಟಿಯು ಬಾಂಗ್ಲಾದೇಶದ ವಿಮೋಚನೆಗೆ ಕಾರಣರಾದ ರಾಷ್ಟ್ರಪಿತ ಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಮತ್ತು 1971ರ ಇಂಡೋ-ಪಾಕ್ ಯುದ್ಧದ 50ನೇ ವಾರ್ಷಿಕೋತ್ಸವವನ್ನು ಆಚರಿಸುವ ಸ್ವರ್ಣೀಮ್ ವಿಜಯ್ ವರ್ಷ್ (Swarnim Vijay Varsh) ಅಂಗವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.