ನವದೆಹಲಿ: 2016ರಲ್ಲಿ ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ಶಾಸಕ ಸೋಮನಾಥ್ ಭಾರತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ಏಮ್ಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸೋಮನಾಥ ಭಾರತಿಗೆ 2 ವರ್ಷ ಜೈಲು ಶಿಕ್ಷೆ - 2016 ರಲ್ಲಿ ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣ
ಸೆಪ್ಟೆಂಬರ್ 9, 2016ರಂದು ಭಾರತಿ ಸುಮಾರು 300 ಜನರ ಜೊತೆ ಆಗಮಿಸಿ ಜೆಸಿಬಿ ಮೂಲಕ ದೆಹಲಿಯ ಏಮ್ಸ್ನಲ್ಲಿ ಗಡಿ ಗೋಡೆಯ ಬೇಲಿಯನ್ನು ನೆಲಸಮ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ಸಾಬೀತಾಗಿದೆ.
ಸೆಪ್ಟೆಂಬರ್ 9, 2016ರಂದು ಭಾರತಿ ಸುಮಾರು 300 ಜನರ ಜೊತೆ ಆಗಮಿಸಿ ಜೆಸಿಬಿ ಮೂಲಕ ದೆಹಲಿಯ ಏಮ್ಸ್ನಲ್ಲಿನ ಗಡಿ ಗೋಡೆಯ ಬೇಲಿಯನ್ನು ನೆಲಸಮ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ಸಾಬೀತಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ 1984ರ ಸೆಕ್ಷನ್ 3 (ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವ ಕಿಡಿಗೇಡಿತನ) ಜೊತೆಗೆ ಐಪಿಸಿ ಸೆಕ್ಷನ್ 149 ಮತ್ತು 147ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಇದಕ್ಕೂ ಮೊದಲು 2021ರ ಜನವರಿಯಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಎಎಪಿ ಮುಖಂಡರಿಗೆ 1 ಲಕ್ಷ ರೂ. ದಂಡ ವಿಧಿಸಿದ್ದರು. ಏಮ್ಸ್ನ ಬೇಲಿ ಹಾಗೂ ಗಡಿ ಗೋಡೆಯನ್ನು ಉರುಳಿಸುವಾಗ ಅದನ್ನು ರಕ್ಷಿಸಲು ಬಂದವರ ಮೇಲೆ ಹಾಗೂ ಅಂದು ನಡೆದ ಕೋಲಾಹಲ ಸಾಕ್ಷಿ ಸಮೇತ ರುಜುವಾತಾಗಿದ್ದು, ಇದನ್ನು ನ್ಯಾಯಾಲಯ ಗಮನಿಸಿದೆ.