ಮಲತಂದೆ ಅಥವಾ ಮಲತಾಯಿಯಾಗಿ ಹೊಸ ಕುಟುಂಬವನ್ನು ರಚಿಸಿಕೊಳ್ಳುವುದು ಕೆಲವೊಮ್ಮೆ ಲಾಭದಾಯಕ, ಹಾಗೆಯೇ ಸವಾಲಿನ ಅನುಭವ ಕೂಡ. ಪರಿಸ್ಥಿತಿಗೆ ಅನುಗುಣವಾಗಿ ಮಲ ತಂದೆ-ತಾಯಿಯರ ಅನುಭವಗಳು ವಿಭಿನ್ನವಾಗಿರುತ್ತದೆ. ವಿಚ್ಛೇದನ ಅಥವಾ ಸಂಗಾತಿಯ ಮರಣದಿಂದ ಉದ್ಭವವಾಗುವ ಸ್ಟೆಪ್ ಪೇರೆಂಟಿಂಗ್ ಕೆಲವು ಸನ್ನಿವೇಶದಲ್ಲಿ ಮಗುವಿನ ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿ ಭಿನ್ನವಾಗಿರುತ್ತದೆ.
ಮಲ ತಂದೆ-ತಾಯಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು:
ನೀವು, ಪೋಷಕರಾಗಿದ್ದು ಸಹ ಮರುಮದುವೆ ಮತ್ತು ಹೊಸ ಕುಟುಂಬವನ್ನು ಬಹಳ ಸಂತೋಷ ಮತ್ತು ನಿರೀಕ್ಷೆಯೊಂದಿಗೆ ಒಪ್ಪಿಕೊಳ್ಳುವ ಸಾಧ್ಯತೆಯಿದ್ದರೂ, ನಿಮ್ಮ ಮಕ್ಕಳು ಹೊಸ ತಂದೆ-ತಾಯಿಯನ್ನು ಹೊಂದುವ ಬಗ್ಗೆ ಉತ್ಸುಕರಾಗಿರುವುದಿಲ್ಲ. ಮುಂಬರುವ ಬದಲಾವಣೆಗಳ ಬಗ್ಗೆ ಮಕ್ಕಳು ಅನಿಶ್ಚಿತತೆಯನ್ನು ಅನುಭವಿಸಬಹುದು. ಅದು ನಿಮ್ಮೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಕ್ಕಳು ತಮ್ಮ ಹೊಸ ಪೋಷಕರ ಜೊತೆ ಬದುಕುವ ಬಗ್ಗೆ ಚಿಂತಿತರಾಗುತ್ತಾರೆ, ಅವರ ಬಗ್ಗೆ ಮಕ್ಕಳಿಗೆ ಚೆನ್ನಾಗಿ ತಿಳಿದಿಲ್ಲದಿರಬಹುದು.
ಪೋಷಕರಾಗಿ, ಮಗುವಿಗೆ ನಮ್ಮ ಪ್ರೀತಿ ಮತ್ತು ಕಾಳಜಿಯನ್ನು ನೀಡಲು ನಾವು ಯಾವಾಗಲೂ ಉತ್ಸುಕರಾಗಿದ್ದೇವೆ, ಆದರೆ ಮಗು ಸಹ ಅದೇ ಭಾವನೆಗಳನ್ನು ಹೊಂದಿರುವುದಿಲ್ಲ. ಮಲತಾಯಿಯಾಗಿ ನಿಮ್ಮಿಂದ ಆಗಬಹುದಾದ ಕೆಲವು ಸಾಮಾನ್ಯ ತಪ್ಪುಗಳು ಇಲ್ಲಿವೆ:
- ಮಗುವಿನೊಂದಿಗೆ ತುಂಬಾ ಆರಾಮದಾಯಕವಾಗಿರಲು ಶತಪ್ರಯತ್ನ
- ನಿಮಗೆ ಇಷ್ಟವಿಲ್ಲದ ಕೆಲಸಗಳನ್ನೂ ಮಾಡುವ ಮೂಲಕ ಮಗುವನ್ನು ಮೆಚ್ಚಿಸಲು ಪ್ರಯತ್ನಿಸುವುದು.ಉದಾಹರಣೆ ಅವರನ್ನು ಪಿಕ್ನಿಕ್ ಅಥವಾ ಸಿನಿಮಾಗೆ ಕರೆದುಕೊಂಡು ಹೋಗುವುದು ಅಥವಾ ಅವರನ್ನು ಮೆಚ್ಚಿಸಲು ಪ್ರಯತ್ನಿಸುವುದು.
- ನೀವು ಮೊದಲೇ ಮಾತನಾಡಿಕೊಳ್ಳದೇ ನಿಮ್ಮ ಹೊಸ ಸಂಗಾತಿಯು ಇದೇ ರೀತಿಯ ಪೋಷಕ ಶೈಲಿಯನ್ನು ಹೊಂದಬೇಕೆಂದು ನಿರೀಕ್ಷಿಸುತ್ತಿರುವುದು; ಪರಸ್ಪರ ಪೋಷಕರ ಶೈಲಿಯ ಬಗ್ಗೆ ನಿಮ್ಮ ಹೊಸ ಸಂಗಾತಿಯೊಂದಿಗೆ ಸಂವಹನ ನಡೆಸುತ್ತಿಲ್ಲ.
- ಮಗುವು ನಿಮ್ಮನ್ನು ಮೆಚ್ಚಿಕೊಳ್ಳಬೇಕೆಂದು ಒಪ್ಪಿಕೊಳ್ಳಬೇಕೆಂದು ಹಾಗೂ ಗೌರವ ಕೊಡಬೇಕೆಂದು ಅತಿಯಾಗಿ ನಿರೀಕ್ಷಿಸುವುದು.
- ಕೆಲವೊಮ್ಮೆ ಜೈವಿಕ ಪೋಷಕರು(biological parent) ಹೊಸ ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವಂತೆ ಮಗುವನ್ನು ಬಲವಂತ ಮಾಡುವುದು.
ಪರಿವರ್ತನೆ ಮಗುವಿಗೆ ಅಷ್ಟು ಸುಲಭವಲ್ಲ, ವಿಶೇಷವಾಗಿ ಕುಟುಂಬಗಳ ವಿಚಾರಕ್ಕೆ ಬಂದಾಗ ಮಗುವಿಗೆ ಹೊಸಬರೊಂದಿಗೆ ಹೊಂದಿಕೊಳ್ಳುವುದು ಬಲು ಕಷ್ಟ. ಹೀಗಾಗಿ ಮೇಲೆ ತಿಳಿಸಿದ ತಪ್ಪುಗಳು ನಿಮ್ಮ ಮಗುವಿನ ಮೇಲೆ ಈ ರೀತಿ ಪರಿಣಾಮ ಬೀರಬಹುದು:
- ಮಕ್ಕಳಿಗೆ ಮಲ ಪೋಷಕರೊಂದಿಗಿನ ಒಡನಾಟ ಅಹಿತಕರ ಎನಿಸಬಹುದು, ಅವರು ಕಿರಿಕಿರಿಗೊಳ್ಳಬಹುದು ಮತ್ತು ಹೊಸ ಪೋಷಕರ ಕಡೆಗೆ ತಿರಸ್ಕಾರ ಹಾಗೂ ಅಸಮಾಧಾನದ ಭಾವನೆಗಳನ್ನು ಬೆಳೆಸಿಕೊಳ್ಳಬಹುದು.
- ಮಗುವಿನ ನಿರೀಕ್ಷೆ ಹೆಚ್ಚಾಗುತ್ತದೆ ಮತ್ತು ಅವರು ಅಂತಿಮವಾಗಿ ನಿರಾಶೆ ಅನುಭವಿಸುತ್ತಾರೆ. ನಿಮ್ಮ ದೈನಂದಿನ ಜೀವನಕ್ಕೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಗಬಹುದು.
- ಕುಟುಂಬದ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಮಗು ಗೊಂದಲಕ್ಕೊಳಗಾಗಬಹುದು ಮತ್ತು ಅವರಿಗೆ ಅಸುರಕ್ಷಿತ ಭಾವ ಮೂಡಬಹುದು.
- ಮಗುವಿಗೆ ಹೊರೆಯಾಗಬಹುದು, ಮತ್ತು ಇದು ಪೋಷಕರಿಗೆ ಮಗು ಹತ್ತಿರವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
- ಮಗುವು ಪ್ರೀತಿಯಿಂದ ಕೂಡಿದ, ಮೌಲ್ಯಯುತವಾದ ಭಾವನೆ ಮತ್ತು ಭಾವನಾತ್ಮಕ ನಂಟನ್ನು ಅನುಭವಿಸದೇ ಇರಬಹುದು.
ಏನು ಮಾಡಬಹುದು:
ಹಾಗಾದರೆ, ಮಗುವಿನೊಂದಿಗೆ ಪ್ರೀತಿಯ ಮತ್ತು ಭಾವನಾತ್ಮಕ ಬಂಧವನ್ನು ಸೃಷ್ಟಿಸಲು ಸ್ಟೆಪ್ ಪೇರೆಂಟ್ಸ್ ಏನು ಮಾಡಬಹುದು? ಎಂಬುದು ಮುಖ್ಯ ಪ್ರಶ್ನೆ.
ನೀವು ಮಲತಂದೆ ಅಥವಾ ಮಲತಾಯಿ ಎಂಬುದನ್ನು ಮೊದಲು ಸ್ವೀಕರಿಸಿ: ನಿಮ್ಮನ್ನು ನೀವು ಮಲತಾಯಿ ಎಂದೇ ಸ್ವೀಕರಿಸುವುದರಿಂದ ಆಗುವ ಪರಿವರ್ತನೆ ನಿಮ್ಮ ಕುಟುಂಬದ ಯೋಗಕ್ಷೇಮಕ್ಕೆ ಅಡಿಪಾಯವಾಗಿದೆ.