ಕೊಚ್ಚಿ (ಕೇರಳ): ಇಸ್ರೋ ಇಂದು ಒಂದು ಮಹತ್ವದ ಪ್ರಯೋಗದ ಯಶಸ್ಸನ್ನು ಎದುರು ನೋಡುತ್ತಿದೆ. ಇದೇ ವೇಳೆ ಮುಂದಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯೋಜನೆಯ ಬಗ್ಗೆ ಕಮಾಂಡರ್ ಅಭಿಲಾಷ್ ಟೋಮಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ರೇಸ್ 2022 ರಲ್ಲಿ ಎರಡನೇ ಸ್ಥಾನ ಗಳಿಸಿದ ಕೇರಳದ ಮಾಜಿ ನೌಕಾ ಅಧಿಕಾರಿ ಮತ್ತು ಭೂಮಿಯನ್ನು ಏಕಾಂಗಿಯಾಗಿ ಪ್ರದಕ್ಷಿಣೆ ಹಾಕಿದ ವ್ಯಕ್ತಿ ಅಭಿಲಾಷ್ ಟೋಮಿ. ಇವರು ಮುಂದಿನ ಇಸ್ರೋದ ಗಗನ್ಯಾನ್ನಲ್ಲಿ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಟಾಮಿ ಇಸ್ರೋದೊಂದಿಗೆ ಸೇರಿ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಬರುವುದಕ್ಕೆ ಕುತೂಹಲವನ್ನು ಹೊಂದಿದ್ದೇನೆ. ಇಸ್ರೋದೊಂದಿಗೆ ಮಾತುಕತೆ ನಡೆದಿರುವುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಆ್ಯಪ್ (ಹಿಂದಿನ ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ.
ಇದಲ್ಲದೆ, ಟೋಮಿ ಅವರು ಭಾರತೀಯ ನೌಕಾಪಡೆಯೊಂದಿಗೆ ಮತ್ತೊಮ್ಮೆ ಭೂಮಿಯನ್ನು ಪರ್ಯಟನೆ ಮಾಡುವ ಮಹಾತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದ್ದಾರೆ. "ಸಮುದ್ರ ಮತ್ತು ಬಾಹ್ಯಾಕಾಶ ಪ್ರದಕ್ಷಿಣೆಗೆ ಏಕಕಾಲದಲ್ಲಿ ಸಮಾಲೋಚನೆ ನಡೆಸುತ್ತಿರುವುದಕ್ಕೆ ರೋಮಾಂಚನವಾಗಿದೆ. ಎರಡೂ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿವೆ. ನಿಜವಾಗಿ, ಸಾಹಸವು ಅಪರಿಚಿತ ಫಲಿತಾಂಶವನ್ನು ಹೊಂದಿದೆ. #gaganyaan," ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.