ಝಾನ್ಸಿ:ಉತ್ತರ ಪ್ರದೇಶದ ಝಾನ್ಸಿ ಬಳಿಯ ಬಬಿನಾ ಕಂಟೋನ್ಮೆಂಟ್‌ನಲ್ಲಿ ಶುಕ್ರವಾರ ಫೀಲ್ಡ್ ಫೈರಿಂಗ್ ಅಭ್ಯಾಸದ ವೇಳೆ ಟಿ - 90 ಟ್ಯಾಂಕ್‌ನ ಬ್ಯಾರೆಲ್ ಒಡೆದ ಪರಿಣಾಮ ಇಬ್ಬರು ಭಾರತೀಯ ಸೇನೆಯ ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.
'ಝಾನ್ಸಿ ಬಳಿಯ ಬಬಿನಾ ಕಂಟೋನ್ಮೆಂಟ್‌ನಲ್ಲಿ ಇಂದು ಫೀಲ್ಡ್ ಫೈರಿಂಗ್ ಅಭ್ಯಾಸದ ವೇಳೆ ಟಿ-20 ಟ್ಯಾಂಕ್‌ನ ಬ್ಯಾರೆಲ್ ಒಡೆದು ಜೆಸಿಒ ಸೇರಿದಂತೆ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯಕ್ಕೆ ಆದೇಶಿಸಲಾಗಿದೆ' ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.