ಪೂಂಚ್ (ಜಮ್ಮು-ಕಾಶ್ಮೀರ): ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಪಡೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಇಂದು ಹುತಾತ್ಮನಾಗಿದ್ದಾನೆ.
ಪೂಂಚ್ನ ಪಾಕ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಹುತಾತ್ಮ - ಪಾಕಿಸ್ತಾನಿ ಪಡೆಯ ಗುಂಡಿನ ದಾಳಿ
ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಪಡೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಉತ್ತರಾಖಂಡ್ ಮೂಲದ ಯೋಧ ಸುಬೇದಾರ್ ಸ್ವತಂತ್ರ ಸಿಂಗ್ ಇಂದು ಹುತಾತ್ಮನಾಗಿದ್ದಾನೆ.
ಯೋಧ ಹುತಾತ್ಮ
ಉತ್ತರಾಖಂಡ್ ಮೂಲದ ಸುಬೇದಾರ್ ಸ್ವತಂತ್ರ ಸಿಂಗ್ ಹುತಾತ್ಮನಾದ ಯೋಧ. ನಿನ್ನೆ ರಾತ್ರಿ ಪೂಂಚ್ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಸಿಂಗ್ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಸುಬೇದಾರ್ ಒಬ್ಬ ಧೈರ್ಯಶಾಲಿ ಮತ್ತು ಪ್ರಾಮಾಣಿಕ ಯೋಧ. ಅವರ ತ್ಯಾಗಕ್ಕೆ ರಾಷ್ಟ್ರವು ಯಾವಾಗಲೂ ಅವರಿಗೆ ಚಿರಋಣಿಯಾಗಿರುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.