ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಉಗ್ರರ ದಾಳಿ: 2 ತಿಂಗಳ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ - ಹರಿಯಾಣದ ಯೋಧ ನಿಶಾನ್​ ಸಿಂಗ್ ಹುತಾತ್ಮ

ಉಗ್ರರು ನಡೆಸಿದ ದಾಳಿಯಲ್ಲಿ ಎದೆಗೆ ಗುಂಡು ತಗುಲಿ ಯೋಧ ನಿಶಾನ್​ ಸಿಂಗ್​ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ
ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ

By

Published : Apr 17, 2022, 5:10 PM IST

ನವದೆಹಲಿ: ಜಮ್ಮು-ಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಶನಿವಾರ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹರಿಯಾಣದ ಯೋಧ ನಿಶಾನ್​ ಸಿಂಗ್ ಹುತಾತ್ಮರಾದರು. 29 ವರ್ಷದ ಈ ಯೋಧ ಕಳೆದ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರು ಹರಿಯಾಣದ ಸಿರ್ಸಾ ಜಿಲ್ಲೆಯ ಭೌದಿನ್​ ಗ್ರಾಮದ ನಿಶಾನ್​​ ಸಿಂಗ್​ 2013ರಲ್ಲಿ ಸೇನೆಗೆ ಸೇರಿದ್ದರು.

ಶನಿವಾರ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗಿನ ಜಾವ 3.15 ಸುಮಾರಿಗೆ ಅನಂತನಾಗ್​ ಜಿಲ್ಲೆಯ ವತ್ನಾರ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಬಂದಿದೆ. ತಕ್ಷಣ ಪೊಲೀಸ್​ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.

ಈ ವೇಳೆ ಉಗ್ರರು ನಡೆಸಿದ ದಾಳಿಯಲ್ಲಿ ಎದೆಗೆ ಗುಂಡು ತಗುಲಿ ನಿಶಾನ್​ ಸಿಂಗ್​ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಶ್ರೀನಗರದಲ್ಲಿ ರವಿವಾರ ಹುತ್ಮಾತ ಯೋಧನಿಗೆ ಸೇನಾಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.

ಇತ್ತ, ಮಗ ಹುತಾತ್ಮರಾದ ಬಗ್ಗೆ ಶನಿವಾರ ಸಂಜೆಯೇ ಸಿರ್ಸಾ ಜಿಲ್ಲೆಯಲ್ಲಿರುವ ಕುಟುಂಬಕ್ಕೂ ಮಾಹಿತಿ ನೀಡಲಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತಂದೆ-ತಾಯಿ, ಪತ್ನಿ ಮತ್ತು ಒಬ್ಬ ಸಹೋದರ ಮತ್ತು ಮೂವರು ಸಹೋದರಿಯರನ್ನು ಯೋಧ ಅಗಲಿದ್ದು, ಇಡೀ ಕುಟುಂಬದವರು ಕಣ್ಣೀರಲ್ಲಿ ಮುಳುಗಿದ್ದಾರೆ. ಇಂದು ರಾತ್ರಿ ವೇಳೆಗೆ ಹುಟ್ಟೂರಿಗೆ ಪಾರ್ಥಿವ ಶರೀರ ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ:ಮಧ್ಯಪ್ರದೇಶದ ಕೆಲವೆಡೆ ಕರ್ಫ್ಯೂ ಜಾರಿ.. ಸರಳ ವಿವಾಹ-ಬೈಕ್​ನಲ್ಲಿ ವಧುವನ್ನು ಕರೆದೊಯ್ದ ವರ..

ABOUT THE AUTHOR

...view details