ಕರ್ನಾಟಕ

karnataka

ETV Bharat / bharat

ಸೋಲಾರ್ ಹಗರಣ; ಸರಿತಾ, ಬಿಜು ರಾಧಾಕೃಷ್ಣನ್ ವಿರುದ್ಧ ಬಂಧನ ವಾರೆಂಟ್ ಜಾರಿ - Court cancels bail granted to Saritha, Biju Radhakrishnan

ಸೌರ ಫಲಕವನ್ನು ಸ್ಥಾಪಿಸುವ ಸಂಬಂಧ ಸರಿತಾ ಮತ್ತು ಬಿಜು ಅವರು ಕೋಜಿಕೋಡ ಮೂಲದ ಅಬ್ದುಲ್ ಮಜೀದ್ ಅವರಿಂದ 42,70,000 ರೂ. ಹಣ ಪಡೆದಿದ್ದರು ಎಂಬ ಆರೋಪ ಇದಾಗಿದೆ.

Court cancels bail granted to Saritha, Biju Radhakrishnan
ಸರಿತಾ, ಬಿಜು ರಾಧಾಕೃಷ್ಣನ್ ವಿರುದ್ಧ ಬಂಧನ ವಾರೆಂಟ್ ಜಾರಿ

By

Published : Feb 11, 2021, 9:32 PM IST

ಕೋಜಿಕೋಡ (ಕೇರಳ) : ಸೋಲಾರ್ ಹಗರಣ ಪ್ರಕರಣದಲ್ಲಿ ಸರಿತಾ ಎಸ್. ನಾಯರ್ ಮತ್ತು ಬಿಜು ರಾಧಾಕೃಷ್ಣನ್ ಅವರ ಜಾಮೀನು ರದ್ದುಪಡಿಸಿದ ನಂತರ ಬಂಧನ ವಾರಂಟ್ ಹೊರಡಿಸಲಾಗಿದೆ.

ಈ ಪ್ರಕರಣದ ತೀರ್ಪಿನ ವಿಚಾರಣೆ ಫೆಬ್ರವರಿ 25 ರಂದು ನಡೆಯಲಿದೆ. ಸೌರ ಫಲಕವನ್ನು ಸ್ಥಾಪಿಸುವ ಸಂಬಂಧ ಸರಿತಾ ಮತ್ತು ಬಿಜು ಅವರು ಕೋಜಿಕೋಡ ಮೂಲದ ಅಬ್ದುಲ್ ಮಜೀದ್ ಅವರಿಂದ 42,70,000 ರೂ. ಹಣ ಪಡೆದಿದ್ದರು ಎಂಬ ಆರೋಪ ಇದೆ.

ಏನಿದು ಪ್ರಕರಣ:

2003ರಲ್ಲಿ ಈ ಹಗರಣ ಜರುಗಿದೆ. ಟೀಮ್ ಸೋಲಾರ್ ಎಂಬ ಹೆಸರಿನ ನಕಲಿ ಕಂಪನಿ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ಮುಂದಾಗಿತ್ತು.

ಈ ಮಹಿಳೆಯರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಆಪ್ತ ಸಿಬ್ಬಂದಿ ಜತೆ ಸಂಪರ್ಕ ಸಾಧಿಸಿ, 70 ಮಿಲಿಯನ್ ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದರು. ಈ ನಕಲಿ ಕಂಪನಿಯ ನಿರ್ದೇಶಕರಾಗಿದ್ದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ನಾಯರ್ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಪಾಲುದಾರಿಕೆ ಆಮಿಷ ಒಡ್ಡಿದ್ದರು.

For All Latest Updates

ABOUT THE AUTHOR

...view details