ಕರ್ನಾಟಕ

karnataka

ETV Bharat / bharat

ಸೊಲ್ಲಾಪುರದ ಎಫ್‌ಜಿಡಿ ಸ್ಥಾವರದಲ್ಲಿ ಭಾರಿ ಸ್ಫೋಟ - ಎಫ್‌ಜಿಡಿ ಸ್ಥಾವರದಲ್ಲಿ ಭಾರಿ ಸ್ಫೋಟ

ಸೊಲ್ಲಾಪುರ ಸಮೀಪದ ಎಫ್‌ಜಿಡಿ ಸ್ಥಾವರದ ಚಿಮಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ದಟ್ಟ ಹೊಗೆ ಆವರಿಸಿತ್ತು.

Solapur: NTPCs FGD plant exploded during demonstration
ಸೊಲ್ಲಾಪುರದ ಎಫ್‌ಜಿಡಿ ಸ್ಥಾವರದಲ್ಲಿ ಭಾರಿ ಸ್ಫೋಟ

By

Published : Jul 21, 2022, 5:31 PM IST

ಸೊಲ್ಲಾಪುರ (ಮಹಾರಾಷ್ಟ್ರ):ಮಹಾರಾಷ್ಟ್ರದ ಸೊಲ್ಲಾಪುರ ಸಮೀಪದ ಅಣು ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ)ದ ಎಫ್‌ಜಿಡಿ ಸ್ಥಾವರದಲ್ಲಿ ಬುಧವಾರ ಸಂಜೆ ಭಾರಿ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಎಫ್‌ಜಿಡಿ (ಫ್ಲೂ-ಗ್ಯಾಸ್ ಡಿಸಲ್ಫರೈಸೇಶನ್) ಸ್ಥಾವರ ಹೊಸ ಯೋಜನೆಯಾಗಿದ್ದು, ಇದರ ಪರೀಕ್ಷಾರ್ಥ ಪ್ರಯೋಗದ ವೇಳೆ ಚಿಮಣಿಯಲ್ಲಿ ಸ್ಫೋಟ ಸಂಭವಿಸಿದೆ. ತಾಂತ್ರಿಕ ದೋಷದಿಂದ ಈ ಘಟನೆ ನಡೆದ ಶಂಕೆ ಇದ್ದು, ಇದರ ನಿಖರ ಕಾರಣ ತಿಳಿಯಲು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೊಲ್ಲಾಪುರದ ಎಫ್‌ಜಿಡಿ ಸ್ಥಾವರದಲ್ಲಿ ಭಾರಿ ಸ್ಫೋಟ

ಸೊಲ್ಲಾಪುರ ನಗರಕ್ಕೆ ಸಮೀಪದಲ್ಲಿ ಎನ್‌ಟಿಪಿಸಿ ಇದ್ದು, 1,320 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಸುತ್ತಮುತ್ತಲಿನ ಪರಿಸರದ ಮೇಲೆ ದುಷ್ಪರಿಣಾಮವನ್ನು ಎಫ್‌ಜಿಡಿ ಸ್ಥಾವರ ನಿರ್ಮಿಸಲಾಗಿದೆ. ಆದರೆ, ಇದರ ಚಿಮಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಇದನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ:ಭೂಕುಸಿತದಿಂದ ಜಮ್ಮು ಕಾಶ್ಮೀರ ಹೆದ್ದಾರಿ ಬಂದ್‌; ಮಾರ್ಗಮಧ್ಯೆ ಸಿಲುಕಿದ ಸಾವಿರಾರು ವಾಹನಗಳು

ABOUT THE AUTHOR

...view details