ಕರ್ನಾಟಕ

karnataka

ETV Bharat / bharat

ಲಕ್ಷ ವೇತನದ ಉದ್ಯೋಗ ತೊರೆದು ಸೀರೆ ಉದ್ಯಮದಲ್ಲಿ ಯಶಸ್ಸು; ಪೊಚಂಪಲ್ಲಿ ಸೀರೆಗೆ ಹೊಸ ಟಚ್​ ನೀಡಿದ ಯುಗೇಂದರ್​​

Success Story: ಇದೀಗ ಇವರು ಏಷ್ಯಾ ಇನ್ಸಿಟಿಟ್ಯೂಟ್​ ಸೇರಿದಂತೆ ಹಲವು ಸಂಘಟನೆಗಳಿಂದ ಉತ್ತಮ ಬ್ಯುಸಿನೆಸ್​ಮ್ಯಾನ್​ ಎಂಬ ಹಲವು ಪ್ರಶಸ್ತಿಗಳನ್ನು ಪಡೆದು ನವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.

Etv Bharatಲಕ್ಷ ವೇತನದ ಉದ್ಯೋಗ ತೊರೆದು ಕುಟುಂಬದ ಸೀರೆ ಉದ್ಯಮದಲ್ಲಿ ಯಶಸ್ಸು
Etv Bhasoftware-gave-a-new-touch-to-pochampally-silk-sareesrat

By ETV Bharat Karnataka Team

Published : Dec 9, 2023, 2:09 PM IST

Updated : Dec 9, 2023, 2:28 PM IST

ಪೊಚಂಪಲ್ಲಿ: ಉನ್ನತ ಶಿಕ್ಷಣ, ಲಕ್ಷಗಟ್ಟಲೆ ವೇತನ ಇಷ್ಟೆಲ್ಲಾ ಇದ್ದರೂ ಆತನಿಗೆ ನೆಮ್ಮದಿ ಇರಲಿಲ್ಲ. ಇದೇ ಕಾರಣಕ್ಕೆ ಆತ ತಮ್ಮ ಹಳ್ಳಿಯಲ್ಲಿಯೇ ಉಳಿದು, ಕುಟುಂಬದ ಉದ್ಯಮ ನಡೆಸಲು ನಿರ್ಧರಸಿದ. ಇದಕ್ಕೆ ತನ್ನ ಹೊಸ ಐಡಿಯಾಗಳನ್ನು ಪ್ರಯೋಗಿಸಲು ಮುಂದಾದ ಜೊತೆಗೆ ಸಂಸ್ಕೃತಿಯೊಂದಿಗೆ ತಂತ್ರಜ್ಞಾನವೂ ಸೇರಿಕೊಂಡಿತು. ಈ ಪರಿಣಾಮವಾಗಿ ಇಂದು ಈತ ಏಷ್ಯಾ ಇನ್ಸಿಟಿಟ್ಯೂಟ್​ ಸೇರಿದಂತೆ ಹಲವು ಸಂಘಟನೆಗಳಿಂದ ಉತ್ತಮ ಬ್ಯುಸಿನೆಸ್​ಮ್ಯಾನ್​ ಎಂಬ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಶಸ್ತಿ ಜೊತೆ ಉದ್ಯಮಿ ಗಂಜಿ ಯುಗೇಂದರ್

ಈ ಸಾಧನೆ ಮಾಡಿದ ವ್ಯಕ್ತಿಯ ಹೆಸರು ಗಂಜಿ ಯುಗೇಂದರ್​​. ಯಾದಾದ್ರಿ ಭುವನಗಿರಿಯ ಪೊಚಂಪಲ್ಲಿಯವರು. ಬಿಟೆಕ್​ ಪೂರ್ಣಗೊಳಿಸಿ ಕೆಲ ಕಾಲ ಸಾಫ್ಟ್​ವೇರ್​ ಉದ್ಯೋಗವನ್ನು ಮಾಡಿದ ಇವರಿಗೆ, ಇದರಲ್ಲಿ ಪರಿಪೂರ್ಣ ಭಾವ ಇರಲಿಲ್ಲ. ಇದಕ್ಕಾಗಿ ಕೆಲಸವನ್ನು ತೊರೆದು ತಮ್ಮ ಅಪ್ಪ- ಅಜ್ಜ ನಡೆಸುತ್ತಿದ್ದ ಸಾಂಪ್ರದಾಯಿಕ ಕೆಲಸ ಮುಂದುವರೆಸಲು ನಿರ್ಧರಿಸಿದರು. ಅದು ಹ್ಯಾಂಡಲೂಮ್​ ಸೀರೆ ಉದ್ಯಮದಲ್ಲಿ ಜನರು ಹಣ ಕಳೆದುಕೊಳ್ಳುವುದನ್ನು ನೋಡಿಯೂ ಈ ಸಾಹಸಕ್ಕೆ ಮುಂದಾದರು. ಇದಕ್ಕೆ ಅವರು ಮಾಡಿದ್ದ ಐಡಿಯಾ, ತಂತ್ರಜ್ಞಾನದ ಅಳವಡಿಕೆ. 'ಇಕ್ಕಟ್​​ ವರ್ಲ್ಡ್​'​ ಎಂಬ ಮಳಿಗೆಯನ್ನು ತೆರೆದು ಆನ್​ಲೈನ್​ನಲ್ಲೂ ಮಾರಾಟಕ್ಕೆ ಮುಂದಾದರು.

ಪ್ರಶಸ್ತಿ ಜೊತೆ ಉದ್ಯಮಿ ಗಂಜಿ ಯುಗೇಂದರ್

ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪೊಚಂಪಲ್ಲಿ: ಯಾದಾದ್ರಿ ಭುವನಗಿರಿ ಜಿಲ್ಲೆಯ ಬುಧನ​ ಪೊಚಂಪಲ್ಲಿ ಜಿಲ್ಲೆಗೆ ಅಂತಾರಾಷ್ಟ್ರೀಯ ಮಾನ್ಯತೆ ಇದೆ. ಇದು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವೂ ಆಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೇ, ತನ್ನದೇ ಆದ ವಿಶಿಷ್ಟ ರೀತಿಯ ಸೀರೆ ನೇಯ್ಗೆಯಿಂದಲೂ ಹೆಸರನ್ನು ಹೊಂದಿದೆ. ಇದೀಗ ಇಕ್ಕಟ್​ ಸೀರೆ ಎಲ್ಲೆಡೆ ಮಾನ್ಯತೆ ಪಡೆದಿದೆ.

ಸೀರೆ ನೆಯುತ್ತಿರುವ ಚಿತ್ರ

ಪೊಚಂಪಲ್ಲಿ ಕೇವಲ ಮಳಿಗೆಯಲ್ಲಿ ಮಾತ್ರವಲ್ಲದೇ ಇ -ಮಾರ್ಕೆಟ್​ನಲ್ಲೂ ಕೂಡ ಇಕ್ಕಟ್​ ಸೀರೆ. ಇಕ್ಕಟ್​ ಎಂಬುದು ವಿಶೇಷ ರೀತಿಯ ರೇಷ್ಮೆ ಎಳೆಗಳಿಂದ ಮಾಡಿರುವ ಸೀರೆಯಾಗಿದೆ. ಇದೀಗ ಯುಗೇಂದರ್​​ ಅವರು 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದ್ದು, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ.

ಪ್ರಶಸ್ತಿ ಜೊತೆ ಉದ್ಯಮಿ ಗಂಜಿ ಯುಗೇಂದರ್

ಗ್ರಾಹಕರ ಆಯ್ಕೆಗೆ ಅನುಗುಣವಾಗಿ ವಿನ್ಯಾಸಗಳು, ಮಾದರಿಗಳು ಮತ್ತು ಇಂಗ್ಲಿಷ್ ಬಣ್ಣಗಳನ್ನು ಒದಗಿಸುವ ಮೂಲಕ ಅವರು ಯಾವಾಗಲೂ ವ್ಯಾಪಾರ ವಲಯದಲ್ಲಿ ಉತ್ಕೃಷ್ಟತೆ ಸಾಧಿಸಬಹುದು ಎನ್ನುತ್ತಾರೆ ಯುಗೇಂದರ್​​.

ಏಷ್ಯಾ ಸಂಘಟನೆ ಆಯೋಜಿಸಿದ್ದ ಶ್ರೀಲಂಕಾ, ಭೂತಾನ್​, ಮಲೇಷ್ಯಾ, ಕೀನ್ಯಾ, ನೇಪಾಳ್​, ಮಾರಿಷಿಯಸ್​ ಮತ್ತು ಮಾಲ್ಡೀವ್ಸ್​ ಸೇರಿದಂತೆ 11 ದೇಶಗಳ ಉದ್ಯಮಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ಗಂಜಿ ಯುಗೇಂದರ್​​ ಬೆಸ್ಟ್​ ಹ್ಯಾಂಡ್​ಲೂಮ್​ ಪ್ರಶಸ್ತಿ ಪಡೆದಿದ್ದಾರೆ. ಹ್ಯಾಂಡ್​ಲೂಮ್​ ಬಟ್ಟೆಗಳಲ್ಲಿ ಇಕ್ಕಟ್​ ಸೀರೆಗೆ ಹೊಸ ವಿನ್ಯಾಸ, ಉತ್ತಮ ಮಾರುಕಟ್ಟೆ, ಆನ್​ಲೈನ್​ ಮಾರಾಟ ಮತ್ತು ಉತ್ತಮ ಮಾರುಕಟ್ಟೆಯಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ.

ಪೂಚಂಪಲ್ಲಿ ಸೀರೆಗಳು ವಿಶೇಷವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಕ್ಕಟ್​ ಸೀರೆಗೆ ಹೊಸ ವಿಧಾನ ಮೂಲಕ ಮಾರುಕಟ್ಟೆಯಲ್ಲೂ ಸ್ಪರ್ಧಿಸುತ್ತಿದೆ. ಎಲ್ಲೋ ಒಂದು ಕಡೆ ಸಂಬಳಕ್ಕಾಗಿ ದುಡಿಯುವ ಬದಲು ನಮ್ಮಲ್ಲಿರುವ ಸಣ್ಣ ವ್ಯಾಪಾರ ಆರಂಭಿಸಿ, ಅದಕ್ಕೆ ಕೆಲಸ ಮಾಡಿ, ನಮ್ಮೊಂದಿಗೆ ಬೇರೆಯವರಿಗೂ ಉದ್ಯೋಗ ನೀಡಿರುವುದು ಸಂತಸ ನೀಡಿದೆ ಎಂದಿದ್ದಾರೆ ಯುಗೇಂದರ್​.

ಇದನ್ನೂ ಓದಿ: ಇದು ಸಂಪೂರ್ಣವಾಗಿ ಮಹಿಳೆಯರೇ ಕೆಲಸ ಮಾಡುವ ಬೈಕ್​ ವರ್ಕ್​ಶಾಪ್!

Last Updated : Dec 9, 2023, 2:28 PM IST

ABOUT THE AUTHOR

...view details