ಕರ್ನಾಟಕ

karnataka

ETV Bharat / bharat

ಸಾವಿರಾರು ಅನಾಥ ಮಕ್ಕಳ ತಾಯಿಯಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ - ಸಿಂಧುತಾಯಿ ಸಪ್ಕಾಲ್​ ನಿಧನ

74 ವರ್ಷದ ಸಪ್ಕಾಲ್​ ಪುಣೆಯ ಗ್ಯಾಲಕ್ಷಿ ಕೇರ್​ ಆಸ್ಪತ್ರೆಯಲ್ಲಿ ಕಳೆದ ರಾತ್ರಿ 8.10ರ ಸಮಯದಲ್ಲಿ ಹೃದಯಾಘಾತದಿಂದ ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಒಂದು ತಿಂಗಳ ಹಿಂದೆ ಆನಾರೋಗ್ಯದ ಕಾರಣ ದಾಖಲಾಗಿದ್ದರು.

Sindhutai Sapkal passes away in Pune
ಸಿಂಧುತಾಯಿ ಸಪ್ಕಾಲ್​ ನಿಧನ

By

Published : Jan 5, 2022, 4:08 AM IST

ಮುಂಬೈ: ಅನಾಥ ಮಕ್ಕಳ ಅಮ್ಮ ಎಂದೇ ಖ್ಯಾತರಾಗಿದ್ದ, 1600ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ದತ್ತು ಪಡೆದು, ಅವರ ಪಾಲಿಗೆ ತಾಯಿಯಾಗಿದ್ದ, ಪದ್ಮಶ್ರೀ ಪುರಸ್ಕೃತೆ ಮಹಾರಾಷ್ಟ್ರದ ಸಿಂಧುತಾಯಿ ಸಪ್ಕಾಲ್​ ಮಂಗಳವಾರ ಪುಣೆಯಲ್ಲಿ ನಿಧನರಾಗಿದ್ದಾರೆ.

74 ವರ್ಷದ ಸಪ್ಕಾಲ್​ ಪುಣೆಯ ಗ್ಯಾಲಕ್ಷಿ ಕೇರ್​ ಆಸ್ಪತ್ರೆಯಲ್ಲಿ ಕಳೆದ ರಾತ್ರಿ 8.10ರ ಸಮಯದಲ್ಲಿ ಹೃದಯಾಘಾತದಿಂದ ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಒಂದು ತಿಂಗಳ ಹಿಂದೆ ಆನಾರೋಗ್ಯದ ಕಾರಣ ದಾಖಲಾಗಿದ್ದರು.

ಬಾಲ್ಯವಿವಾಹಕ್ಕೆ ಒಳಗಾಗಿದ್ದ ಸಿಂಧುತಾಯಿ ಸಪ್ಕಾಲ್​, ಗಂಡನಿಂದ ಮತ್ತು ಅವರ ಮನೆಯವರಿಂದ ಹಿಂಸೆಗೆ ಒಳಪಟ್ಟಿದ್ದರು. 20ನೇ ವಯಸ್ಸಿಗೆ 4ನೇ ಬಾರಿ ತಾಯಿಯಾಗಿದ್ದ ಅವರನ್ನು ಗಾಳಿ ಸುದ್ದಿ ಕೇಳಿ ಅವರ ಗಂಡ ಗರ್ಭಿಣಿ ಎನ್ನವುದನ್ನೂ ನೋಡದೇ ಸಾಯುವಂತೆ ಹೊಡೆದು ಮನೆಯಿಂದ ಹೊರಹಾಕಿದ್ದರು. ತುಂಬು ಗರ್ಭಿಣಿಯಾಗಿದ್ದ ಸಪ್ಕಾಲ್​ ದನದ ಕೊಟ್ಟಿಗೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ನಂತರ ತನ್ನ ತಾಯಿ ಮನೆಗೆ ತೆರಳಿದರೂ, ಅಲ್ಲಿಯೂ ಇವರಿಗೆ ಉಳಿಯಲು ಅವಕಾಶ ಸಿಗದೇ ತಿರಸ್ಕಾರಕ್ಕೆ ಒಳಪಟ್ಟರು.

ಕೊನೆಗೆ ಮಗಳ ಹೊಟ್ಟೆ ತುಂಬಿಸುವುದಕ್ಕಾಗಿ ರಸ್ತೆಗಳಲ್ಲಿ ಮತ್ತು ರೈಲುಗಳಲ್ಲಿ ಹಾಡುತ್ತಾ ಬಿಕ್ಷಾಟನೆ ಮಾಡಲು ಶುರುಮಾಡಿದರು. ರಾತ್ರಿ ವೇಳೆ ತನ್ನ ಮತ್ತು ಮಗಳ ರಕ್ಷಣೆಗಾಗಿ ದನದ ಕೊಟ್ಟಿಗೆ ಅಥವಾ ಸ್ಮಶಾನದಲ್ಲಿ ಮಲಗುತ್ತಿದ್ದದ್ದಾಗಿ ಸ್ವತಃ ಸಪ್ಕಾಲ್​ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಹೀಗೇ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುತ್ತಾ ಅನಾಥರಾಗಿ ಸಿಕ್ಕ ಮಕ್ಕಳನ್ನೆಲ್ಲಾ ದತ್ತು ತೆಗೆದುಕೊಳ್ಳುತ್ತಾ ಸಾಗಿದರು. 1970ರಲ್ಲಿ ಕೆಲವು ಹಿತೈಷಿಗಳು ಸಿಂಧುತಾಯಿಗೆ ಅಮ್ರಾವತಿಯ ಚಿಕಲ್ದಾರದಲ್ಲಿ ಒಂದು ಆಶ್ರಮವನ್ನು ನಿರ್ಮಿಸಿಕೊಟ್ಟರು. ನಂತರ ಸಪ್ಕಾಲ್​ ಅಲ್ಲಿಯೇ ಸಾವಿತ್ರಿಬಾಯಿ ಪುಲೆ ಬಾಲಕಿಯರ ಹಾಸ್ಟೆಲ್​ ನಿರ್ಮಿಸಿದರು. ತಮ್ಮ ಜೀವನವನ್ನೆಲ್ಲಾ ಅನಾಥ ಮಕ್ಕಳಿಗಾಗಿ ಮುಡಿಪಾಗಿಟ್ಟಿದ್ದ ಅವರೂ ತಾವೂ ದತ್ತು ತೆಗೆದುಕೊಂಡ ಮಕ್ಕಳನ್ನೆಲ್ಲಾ ಓದಿಸಿ, ಅವರಿಗೆ ಒಳ್ಳೆಯ ಜೀವನ ರೂಪಿಸಿಕೊಟ್ಟಿದ್ದಾರೆ. ಅವರು ದತ್ತು ತೆಗೆದುಕೊಂಡಿದ್ದ ಮಕ್ಕಳಲ್ಲಿ ಕೆಲವರು ವಕೀಲರು, ವೈದ್ಯ ವೃತ್ತಿರಾಗಿದ್ದಾರೆ. ಸ್ವಂತ ಮಗಳು ಸೇರಿದಂತೆ ಇನ್ನೂ ಕೆಲವರು ತಮ್ಮದೇ ಆದ ಅನಾಥಾಲಯಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಿಂಧುತಾಯಿ ಅವರ ಬೆಲೆಕಟ್ಟಲಾಗದ ಸೇವೆಗೆ ಹಲವು ಪದ್ಮಶ್ರೀ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ 270ಕ್ಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ. ಮಹಿಳಾ ಸಾಧಕಿಯರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾರಿ ಶಕ್ತಿ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು 2017ರಲ್ಲಿ ನೀಡಿ ಗೌರವಿಸಿದ್ದರು. 2010ರಲ್ಲಿ ಮಿ ಸಿಂಧುತಾಯಿ ಸಪ್ಕಾಲ್​ ಎಂದ ಇವರ ಜೀವನಾಧಾರಿತ ಮರಾಠಿ ಸಿನಿಮಾ ಕೂಡ ಬಿಡುಗಡೆಯಾಗಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್​​ ಸೇರಿದಂತೆ ರಾಜಕೀಯ ನಾಯಕರು, ಸೆಲೆಬ್ರೆಟಿಗಳು ಸಿಂಧುತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಸ್ಫೋಟಗೊಂಡ ಕೊರೊನಾ: 18,466 ಹೊಸ ಕೇಸ್​​, 20 ಜನರು ಸಾವು:

ABOUT THE AUTHOR

...view details