ಅಹ್ಮದ್‌ನಗರ(ಮಹಾರಾಷ್ಟ್ರ):ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್, ಹರಿಯಾಣ ಸೇರಿದಂತೆ ದೇಶಾದ್ಯಂತ ರೈತರು ಇನ್ನೂ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಸರ್ಕಾರ ಮೌನ ತಾಳಿರುವುದರ ಬಗ್ಗೆ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರವು ರೈತರ ಪ್ರತಿಭಟನೆ ನಿರ್ಲಕ್ಷಿಸುತ್ತಿದೆ. ಚುನಾವಣೆಯ ಸಮಯದಲ್ಲಿ ನೀವು ಮತಗಳನ್ನು ಕೇಳಲು ರೈತರ ಬಳಿಗೆ ಹೋಗಲು ಸಾಧ್ಯವಾದರೆ, ರೈತರ ಆಂದೋಲನ ನಡೆಯುತ್ತಿರುವಾಗ ನೀವು ಯಾಕೆ ಅವರೊಂದಿಗೆ ಹೋಗಿ ಚರ್ಚಿಸಬಾರದು ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸರ್ಕಾರವು ರೈತರನ್ನು ನಡೆಸುವ ರೀತಿ ಮಾತ್ರ ಸೂಕ್ತವಾಗಿಲ್ಲ. ಚುನಾವಣೆ ಬಂದಾಗ ರಾಜಕಾರಣಿಗಳು ರೈತರ ಬಳಿಗೆ ಹೋಗುತ್ತಾರೆ. ಕೆಲವೊಂದು ಸಂದರ್ಭ ಮನೆಗೇ ಹೋಗಿ ಮತ ಕೇಳುತ್ತಾರೆ. ಆದ್ರೆ ಅವರ ಬೇಡಿಕೆಗಳನ್ನು ಕೇಳಲು ಯಾಕೆ ಹಿಂದೇಟು ಹಾಕುತ್ತಿದೆ. ಸರ್ಕಾರ ಈ ಕುರಿತು ಅವರೊಂದಿಗೆ ಏಕೆ ಚರ್ಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.