ಕರ್ನಾಟಕ

karnataka

ಕೋವ್ಯಾಕ್ಸಿನ್‌ನಲ್ಲಿ ನವಜಾತ ಕರು ಸೀರಮ್ ಬಳಕೆಯಾಯ್ತೇ.. ಕೇಂದ್ರ ಆರೋಗ್ಯ ಸಚಿವಾಲಯದ ಸ್ಪಷ್ಟನೆ ಹೀಗಿದೆ..

By

Published : Jun 16, 2021, 3:14 PM IST

Updated : Jun 16, 2021, 3:49 PM IST

ವೈರಸ್ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವೆರೋ ಕೋಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅದರ ನಂತರ, ಬೆಳೆದ ವೈರಸ್ ಅನ್ನು ಸಹ ಕೊಲ್ಲಲಾಗುತ್ತದೆ (ನಿಷ್ಕ್ರಿಯಗೊಳಿಸಲಾಗಿದೆ) ಮತ್ತು ಶುದ್ಧೀಕರಿಸಲಾಗುತ್ತದೆ ಎಂದು ಅದು ಹೇಳಿದೆ. ಕೊಲ್ಲಲ್ಪಟ್ಟ ಅಥವಾ ನಿಷ್ಕ್ರಿಯಗೊಳಿಸಿದ ವೈರಸ್ ಅನ್ನು ಅಂತಿಮ ಲಸಿಕೆ ತಯಾರಿಸಲು ಬಳಸಲಾಗುತ್ತದೆ..

Social media posts twisted facts, final product doesn't have newborn calf serum: Centre on Covaxin
Social media posts twisted facts, final product doesn't have newborn calf serum: Centre on Covaxin

ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾದ ಕೋವ್ಯಾಕ್ಸಿನ್‌ನಲ್ಲಿ ನವಜಾತ ಕರು ಸೀರಮ್ ಇದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಸತ್ಯಗಳನ್ನು "ತಿರುಚಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ನವಜಾತ ಕರು ಸೀರಮ್ ಅನ್ನು ಕೇವಲ ವೆರೋ ಕೋಶಗಳ ತಯಾರಿಕೆ ಮತ್ತು ಬೆಳವಣಿಗೆಗೆ ಮಾತ್ರ ಬಳಸಲಾಗುತ್ತದೆ.

ಹಸು ಮತ್ತು ಇತರ ಪ್ರಾಣಿಗಳಿಂದ ಬರುವ ಸೀರಮ್ ವೆರೋ ಸೆಲ್ಸ್​​ ಬೆಳವಣಿಗೆಗೆ ಬಳಸುವ ಜಾಗತಿಕವಾಗಿ ಪ್ರಮಾಣಿತ ಪುಷ್ಟೀಕರಣದ ಅಂಶವಾಗಿದೆ ಎಂದು ಅದು ಹೇಳಿದೆ. ಪೋಲಿಯೋ, ರೇಬೀಸ್ ಮತ್ತು ಇತರೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹ ಈ ನವಜಾತ ಕರು ಸೀರಮ್ ಅನ್ನು ದಶಕಗಳಿಂದ ಬಳಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ವೆರೋ ಸೆಲ್ಸ್​​ ಬೆಳವಣಿಗೆಯ ನಂತರ ಅವುಗಳನ್ನು ನೀರಿನಲ್ಲಿ ಮತ್ತು ರಾಸಾಯನಿಕಗಳನ್ನು ಬಳಸಿ ತೊಳೆಯಲಾಗುತ್ತದೆ. ಇದನ್ನು ತಾಂತ್ರಿಕವಾಗಿ ಬಫರ್ ಎಂದು ಕರೆಯಲಾಗುತ್ತದೆ. ನವಜಾತ ಕರು ಸೀರಮ್‌ನಿಂದ ಮುಕ್ತಗೊಳಿಸಲು ಈ ವಿಧಾನವನ್ನು ಅನೇಕ ಬಾರಿ ಮಾಡಲಾಗುತ್ತದೆ. ನಂತರ ವೆರೋ ಕೋಶಗಳು ಬೆಳವಣಿಗೆಗೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗುತ್ತವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ವೈರಸ್ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವೆರೋ ಕೋಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅದರ ನಂತರ, ಬೆಳೆದ ವೈರಸ್ ಅನ್ನು ಸಹ ಕೊಲ್ಲಲಾಗುತ್ತದೆ (ನಿಷ್ಕ್ರಿಯಗೊಳಿಸಲಾಗಿದೆ) ಮತ್ತು ಶುದ್ಧೀಕರಿಸಲಾಗುತ್ತದೆ ಎಂದು ಅದು ಹೇಳಿದೆ. ಕೊಲ್ಲಲ್ಪಟ್ಟ ಅಥವಾ ನಿಷ್ಕ್ರಿಯಗೊಳಿಸಿದ ವೈರಸ್ ಅನ್ನು ಅಂತಿಮ ಲಸಿಕೆ ತಯಾರಿಸಲು ಬಳಸಲಾಗುತ್ತದೆ.

ಅಂತಿಮ ಲಸಿಕೆ ತಯಾರೀಕರಣದಲ್ಲಿ ಯಾವುದೇ ಕರು ಸೀರಮ್ ಅನ್ನು ಬಳಸಲಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಕೋವ್ಯಾಕ್ಸಿನ್‌ ನವಜಾತ ಕರು ಸೀರಮ್ ಅನ್ನು ಹೊಂದಿರುವುದಿಲ್ಲ ಮತ್ತು ಕರು ಸೀರಮ್ ಅಂತಿಮ ಲಸಿಕೆ ಉತ್ಪನ್ನದ ಘಟಕಾಂಶವಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ಹೊಸ ಸೋಂಕಿತರಲ್ಲಿ ಸ್ವಲ್ಪ ಏರಿಕೆ; ಈವರೆಗೆ 26 ಕೋಟಿ ಮಂದಿಗೆ ವ್ಯಾಕ್ಸಿನ್​

Last Updated : Jun 16, 2021, 3:49 PM IST

ABOUT THE AUTHOR

...view details