ಕರ್ನಾಟಕ

karnataka

ETV Bharat / bharat

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಿಟ್ ಇವರು! ಜೋಧಪುರದ 'ಮಿನಿ ಕಪಲ್‌' ಮದುವೆ - ಸೋಶಿಯಲ್​ ಮೀಡಿಯಾದಲ್ಲಿ ಮಿನಿ ಕಪುಲ್ ಲವ್

ರಾಜಸ್ಥಾನದ ವಿಶಿಷ್ಠ ಜೋಡಿಯೊಂದರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಧು-ವರರಿಬ್ಬರೂ ಕುಬ್ಜರಾಗಿರುವುದು ವಿಶೇಷವಾಗಿದೆ.

Social Media Favorite  jodhpur mini couple wedding  Mini Couple From Jodhpur Got Married  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು  ಹಿರಿಯರ ಆಶೀರ್ವಾದದಿಂದ ಅದ್ಧೂರಿಯಾಗಿ ಮದುವೆ  ವರ ರಾಜ್​ ಇನ್‌ಸ್ಟಾದಲ್ಲಿ ಸಕ್ರಿಯ  ಸೋಷಿಯಲ್ ಮೀಡಿಯಾದ ಪ್ರೇಮ ಕಥೆ  ಸೋಶಿಯಲ್​ ಮೀಡಿಯಾದಲ್ಲಿ ಮಿನಿ ಕಪುಲ್ ಲವ್  ಅದ್ದೂರಿಯಾಗಿ ನಡೆದ ಕುಬ್ಜ ಜೋಡಿಯ ಕಲ್ಯಾಣ ಮಹೋತ್ಸವ
ಸೋಶಿಯಲ್​ ಮೀಡಿಯಾದಲ್ಲಿ ಮಿನಿ ಕಪುಲ್ ಲವ್

By

Published : Jan 30, 2023, 9:09 AM IST

ಜೋಧಪುರ (ರಾಜಸ್ಥಾನ): ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತಂತೆ. ಈ ಮಾತು ಜೋಧ್‌ಪುರದ ಸಾಕ್ಷಿ ಮತ್ತು ರಾಜ್‌ಸಮಂದ್‌ನ ರಿಷಬ್‌ಗೂ ಅನ್ವಯಿಸುತ್ತದೆ. ಇವರ ದೇಹದ ಎತ್ತರ 3 ಅಡಿ 7 ಇಂಚುಗಳ ಆಸುಪಾಸಿನಲ್ಲಿದೆ. ಇವರ ಉತ್ಸಾಹ, ಉಲ್ಲಾಸ ಮುಗಿಲೆತ್ತರ. ದೇಹದ ಎತ್ತರದ ವಿಚಾರ ಒತ್ತಟ್ಟಿಗಿಟ್ಟರೆ ಇಬ್ಬರೂ ಸಮರ್ಥರೇ. ಬಿಕಾಂ ಮತ್ತು ಎಂಬಿಎ ಪದವಿ ಶಿಕ್ಷಣದ ನಂತರ ಸಾಕ್ಷಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುವ ಕಾಯಕ ಮಾಡುತ್ತಿದ್ರೆ, ರಿಷಬ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿದ್ದಾರೆ.

ಸಾಕ್ಷಿ ಮತ್ತು ರಿಷಬ್ ಜೋಡಿ

ಇನ್‌ಸ್ಟಾದಲ್ಲಿ ಸಕ್ರಿಯ:ರಿಷಬ್ ಅವರ ಐಡಿ ಇನ್ಸ್‌ಟಾಗ್ರಾಂನಲ್ಲಿದೆ. ಎರಡು ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮಿನಿ ಇನ್‌ಫ್ಲುಯೆನ್ಸರ್ಸ್ 31 ಎಂಬ ಐಡಿಯೂ ಇದೆ. ಇದು ಸುಮಾರು ಒಂದು ವರ್ಷದಷ್ಟು ಹಳೆಯದು. ಇದರಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಖಾತೆಯಲ್ಲಿ ಮದುವೆಯ ವಿಡಿಯೋ ಪ್ರಕಟಿಸಿದ್ದು ಲೈಕುಗಳ ಮಹಾಪೂರವೇ ಹರಿದುಬಂದಿದೆ.

ಜೋಧಪುರದ ಈ 'ಮಿನಿ ಜೋಡಿ' ತುಂಬಾ ಫೇಮಸ್. ಒಂದು ವರ್ಷದ ಹಿಂದೆ ಇವರ ಮದುವೆ ನಿಶ್ಚಯವಾಗಿತ್ತು. ಜನವರಿ 26 ರಂದು ಇವರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ದಂಪತಿ ತಮ್ಮ ಹತ್ತಿರದ ಮತ್ತು ಆತ್ಮೀಯ ಬಂಧುಗಳ ನಡುವೆ ತಿರುಗುವ ವಿಶಿಷ್ಟ ವೇದಿಕೆಯಲ್ಲಿ ಪರಸ್ಪರ ಹಾರ ಬದಲಾಯಿಸಿದ್ದಾರೆ. ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭ ಹಾರೈಕೆಗಳಲ್ಲಿ ಮದುವೆ ಸಂಭ್ರಮದಿಂದ ನಡೆಯಿತು. ರಿಷಬ್‌​ಗೆ ಡ್ಯಾನ್ಸ್‌ ಎಂದರೆ ಹೆಚ್ಚು ಒಲವು. ಹಾಗಾಗಿ ಮದುವೆಯಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ರಿಷಬ್‌​ ಸಹೋದರಿ ರಾಧಿಕಾ-ಪ್ರತಿಭಾ ಮತ್ತು ಸಾಕ್ಷಿ ಅವರು ತಮ್ಮ ಸಹೋದರನ ಮದುವೆ ಸಮಾರಂಭದ ಎಲ್ಲಾ ವಿಧಿ-ವಿಧಾನಗಳ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಸಾಕ್ಷಿ ಮತ್ತು ರಿಷಬ್ ಜೋಡಿ

ಸೋಷಿಯಲ್ ಮೀಡಿಯಾ ಪ್ರೇಮಕಥೆ: ಸಾಕ್ಷಿ ಅವರು ರಿಷಬ್‌ನನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿದ್ದಾರೆ. ಆ ಬಳಿಕ ಸಾಕ್ಷಿ ಪ್ರತಿ ಕ್ಷಣವನ್ನೂ ರಿಷಬ್​ನನ್ನೇ ನೆನಪಿಸಿಕೊಳ್ಳುತ್ತಿದ್ದರಂತೆ. ಇವರಿಬ್ಬರ ಸ್ನೇಹವು ಪ್ರೀತಿಗೆ ತಿರುಗುತ್ತಿದ್ದಂತೆ ಮನೆಯವರೂ ಒಪ್ಪಿ ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ನಂತರ ಇಬ್ಬರೂ ಭೇಟಿಯಾದಾಗ ಏನಾದ್ರೂ ಹೊಸದು ಮಾಡಬೇಕೆಂಬ ಯೋಜನೆ ಹಾಕಿದ್ದರು. ಹೀಗಾಗಿ ಸಾಕ್ಷಿ-ರಿಷಬ್ ಇನ್‌ಸ್ಟಾದಲ್ಲಿ ಮಿನಿ ಕಪಲ್ ಎಂಬ ಐಡಿ ರಚಿಸಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಆಗಿನಿಂದಲೂ ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಿಟ್ ಆದರು ಎಂದು ಅವರ ಸಹೋದರ ಹೇಳುತ್ತಾರೆ. ರಿಷಭ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ರೀತಿ ನೋಡಿದ್ರೆ ಆದಷ್ಟು ಬೇಗ ಅವರು ತಮ್ಮ ಗುರಿ ಮುಟ್ಟುತ್ತಾರೆ. ಸರ್ಕಾರಿ ಅಧಿಕಾರಿ ಆಗುತ್ತಾರೆ ಎಂಬ ಭರವಸೆ ನಮಗಿದೆ ಎನ್ನುತ್ತಾರೆ ರಿಷಬ್​ ಕುಟುಂಬಸ್ಥರು.

ನಾಲ್ಕು ದಿನಗಳ ಹಿಂದೆ ಸಂಬಂಧಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಸಾಕ್ಷಿ ಮತ್ತು ರಿಷಬ್ ಇನ್‌ಸ್ಟಾಗ್ರಾಮ್‌ನಲ್ಲಿ 'ಮಿನಿ ಕಪಲ್' ಎಂಬ ಐಡಿಯಲ್ಲಿ ತಮ್ಮ ಮದುವೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದವರೆಲ್ಲ ನವದಂಪತಿಗೆ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಅಕ್ಷರ್‌ ಪಟೇಲ್; ಗೆಳತಿಯೇ ಬಾಳಸಂಗಾತಿ ​

ABOUT THE AUTHOR

...view details