ಸ್ಯಾನ್ ಫ್ರಾನ್ಸಿಸ್ಕೊ: ಅತ್ಯಂತ ಹಳೆಯ ಇಂಟರ್ನೆಟ್ ಬ್ರೌಸರ್ಗಳಲ್ಲಿ ಒಂದಾದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇಂದಿನಿಂದ (ಜೂನ್ 15) ರಿಂದ ನೇಪಥ್ಯಕ್ಕೆ ಸರಿಯಲಿದೆ. 27 ವರ್ಷಗಳ ಕಾಲ ಸುದೀರ್ಘ ಅವಧಿಯವರೆಗೆ ಚಾಲನೆಯಲ್ಲಿದ್ದ ಎಕ್ಸ್‌ಪ್ಲೋರರ್‌ಗೆ ತಾಂತ್ರಿಕ ಬೆಂಬಲವನ್ನು ಇಂದಿನಿಂದ ನಿಲ್ಲಿಸಲಾಗುತ್ತಿದೆ ಎಂದು ಮೈಕ್ರೊಸಾಫ್ಟ್ ಕಂಪನಿ ತಿಳಿಸಿದೆ.
ಬ್ಲ್ಯಾಕ್ ಬೆರ್ರಿ ಫೋನುಗಳು, ಡಯಲ್ ಅಪ್ ಮೋಡೆಮ್ಗಳು ಹಾಗೂ ಪಾಮ್ ಪೈಲಟ್ಗಳ ರೀತಿಯಲ್ಲೇ ಇಂಟರ್ನೆಟ್ ಎಕ್ಸ್‌ಪ್ಲೋರರ್ ತಂತ್ರಜ್ಞಾನ ಜಗತ್ತಿನಿಂದ ಕಣ್ಮರೆಯಾಗಲಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ನೇಪಥ್ಯಕ್ಕೆ ಸರಿದಿದ್ದು, ಜಗತ್ತಿಗೆ ಅಂಥ ಆಶ್ಚರ್ಯವೇನೂ ಉಂಟು ಮಾಡಿಲ್ಲ. ಜೂನ್ 15, 2022ರಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ತಾನು ತಾಂತ್ರಿಕ ಬೆಂಬಲ ನಿಲ್ಲಿಸುವುದಾಗಿ ಮೈಕ್ರೊಸಾಫ್ಟ್ ಒಂದು ವರ್ಷದ ಹಿಂದೆಯೇ ಘೋಷಣೆ ಮಾಡಿತ್ತು.
2015ರಲ್ಲಿ ಲಾಂಚ್ ಮಾಡಲಾದ ಮೈಕ್ರೊಸಾಫ್ಟ್ ಎಜ್‌ಬ್ರೌಸರ್ ಅನ್ನು ಮಾರುಕಟ್ಟೆಯಲ್ಲಿ ಮುಂಚೂಣಿಗೆ ತರುವುದಾಗಿ ಮೈಕ್ರೊಸಾಫ್ಟ್ ಹೇಳಿತ್ತು. ಈಗ ಅದರಂತೆಯೇ ಎಲ್ಲವೂ ನಡೆಯುತ್ತಿದೆ. "ಮೈಕ್ರೊಸಾಫ್ಟ್ ಎಜ್ ಬಹಳ ವೇಗವಾಗಿ ಕೆಲಸ ಮಾಡುವುದರ ಜೊತೆಗೆ ಆಧುನಿಕ ತಾಂತ್ರಿಕತೆಯಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವಾಗ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಒಳಗೊಂಡಿದೆ.