ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಹಿಮಪಾತ: ದೆಹಲಿಯಲ್ಲಿ ತಾಪಮಾನ ಭಾರಿ ಕುಸಿತ

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ತಾಪಮಾನ 8 ಡಿಗ್ರಿ ಸೆಲ್ಸಿಯಸ್​​ಗೆ ಕುಸಿತ ಕಂಡಿದೆ. ಇಂದು ಕನಿಷ್ಠ 8 ಹಾಗೂ ದಿನದ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್​ ಇರಬಹುದು ಎಂದು ಮೆಟ್ರೋಲಾಜಿಕಲ್​ ಇಲಾಖೆ ತಿಳಿಸಿದೆ.

mercury-at-0-degrees
ದೆಹಲಿಯಲ್ಲಿ ತಾಪಮಾನ

By

Published : Nov 23, 2020, 10:53 AM IST

ನವದೆಹಲಿ:ಜಮ್ಮು- ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಎಲ್ಲಿ ನೋಡಿದರೂ ಹಿಮದ ರಾಶಿಯ ದರ್ಶನವಾಗುತ್ತಿದೆ. ಪೀರ್​ಪಂಜಾಲ್​​ ಬೆಟ್ಟಗಳ ಸಾಲಿನಲ್ಲಿ ಭಾರಿ ಪ್ರಮಾಣದಲ್ಲಿ ಮಂಜು ಆವರಿಸಿಕೊಂಡಿರುವ ಪರಿಣಾಮ ದೆಹಲಿಯಲ್ಲಿ ತಾಪಮಾನ ಭಾರಿ ಕುಸಿದಿದೆ.

ಜಮ್ಮು-ಕಾಶ್ಮೀರದ ಹಲವೆಡೆ ಕಳೆದ ಹಲವು ದಿನಗಳಿಂದ ಭಾರಿ ಹಿಮಪಾತವಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಿಮಪಾತದಿಂದಾಗಿ ಬಹುತೇಕ ರಸ್ತೆಗಳು ಮುಚ್ಚಿ ಹೋಗಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಜೌರಿ ಜಿಲ್ಲೆಯ ಮುಘಲ್ ರಸ್ತೆ ಸಂಪೂರ್ಣ ಹಿಮದಿಂದ ಆವೃತಗೊಂಡು ರಸ್ತೆಯನ್ನು ಬಂದ್​ ಮಾಡಲಾಗಿದೆ.

ಕಾಶ್ಮೀರದಲ್ಲಿ ಹಿಮಪಾತ

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ತಾಪಮಾನ 8 ಡಿಗ್ರಿ ಸೆಲ್ಸಿಯಸ್​​ಗೆ ಕುಸಿತ ಕಂಡಿದೆ. ಇಂದು ಕನಿಷ್ಠ 8 ಹಾಗೂ ದಿನದ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್​ ಇರಬಹುದು ಎಂದು ಹವಾಮಾನ ಇಲಾಖೆ ಇಲಾಖೆ ತಿಳಿಸಿದೆ.

ಇನ್ನು ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೌಂಟ್ ಅಬು ಹಿಮ ಗಡ್ಡೆಯಾಗಿದ್ದು ಸುತ್ತ ಮುತ್ತಲಿನ ಜನರು ವಾಸಿಸಲು ಕಷ್ಟವಾಗಿದೆ. ಈ ಪ್ರದೇಶದಲ್ಲಿ ಕನಿಷ್ಠ ತಾಪಮಾನ 0 ಡಿಗ್ರಿ ಮತ್ತು ಗರಿಷ್ಠ ತಾಪಮಾನ 21 ಡಿಗ್ರಿ ದಾಖಲಾಗಿದೆ. ಬಯಲು ಪ್ರದೇಶಗಳಲ್ಲಿ ಇಬ್ಬನಿ ಹನಿ ಹೆಪ್ಪುಗಟ್ಟಿರುವುದು ಕಂಡುಬಂದಿದೆ, ಹೋಟೆಲ್‌ಗಳು ಮತ್ತು ಮನೆಗಳ ಹೊರಗೆ ನಿಲ್ಲಿಸಿದ್ದ ಕಾರುಗಳ ಮೇಲೆ ಹಿಮ ಆವರಿಸುತ್ತಿದೆ.

ABOUT THE AUTHOR

...view details