ಕರ್ನಾಟಕ

karnataka

ETV Bharat / bharat

ಚೆನ್ನೈನಲ್ಲಿ ಡ್ರಗ್ಸ್​ ಪೆಡ್ಲರ್​ ಮಹಿಳೆಯ ಹಿಡಿದುಕೊಟ್ಟ ಪೊಲೀಸ್ ಶ್ವಾನ - Drug peddler Ugandan woman arrested

ಚೆನ್ನೈ ವಿಮಾನ ನಿಲ್ದಾಣದಲ್ಲಿ ಉಗಾಂಡಾದಿಂದ ಸಾಗಿಸಲಾಗುತ್ತಿದ್ದ ಡ್ರಗ್ಸ್​ಅನ್ನು ಪೊಲೀಸ್ ಶ್ವಾನ ಪತ್ತೆ ಮಾಡಿದೆ.

sniffer-dog-orio-busts-ugandan-woman-drug-smuggler
ಗ್ಸ್​ ಪೆಡ್ಲರ್​ ಮಹಿಳೆಯ ಹಿಡಿದುಕೊಟ್ಟ ಬೇಟೆ ಶ್ವಾನ ಓರಿಯೋ

By

Published : Dec 21, 2022, 11:30 AM IST

ಚೆನ್ನೈನಲ್ಲಿ ಡ್ರಗ್ಸ್​ ಪೆಡ್ಲರ್​ ಮಹಿಳೆಯ ಹಿಡಿದುಕೊಟ್ಟ ಪೊಲೀಸ್ ಶ್ವಾನ

ಚೆನ್ನೈ(ತಮಿಳುನಾಡು):ವಿದೇಶಗಳಿಂದ ಡ್ರಗ್ಸ್​ ಸಾಗಣೆಗೆ ಎಷ್ಟೇ ಕಡಿವಾಣ ಹಾಕಿದರೂ ಅದರ ಹರಿವು ಮಾತ್ರ ನಿಂತಿಲ್ಲ. ಉಗಾಂಡಾದಿಂದ ಮಹಿಳೆಯೊಬ್ಬಳು ರಹಸ್ಯವಾಗಿ ಸಾಗಿಸುತ್ತಿದ್ದ ಅಫೀಮನ್ನು ಪೊಲೀಸ್​ ಶ್ವಾನ ಪತ್ತೆ ಹಚ್ಚಿದೆ. 5.35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಅನ್ನು ಜಪ್ತಿ ಮಾಡಲಾಗಿದೆ.

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಗಾಂಡಾ ಮಹಿಳೆಯ ಬ್ಯಾಗೇಜ್​ನಲ್ಲಿ ಡ್ರಗ್ಸ್​ ಇರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಮಹಿಳೆಯನ್ನು ತಡೆದು ಪರಿಶೀಲಿಸಲಾಯಿತು. ಬಳಿಕ ಆಕೆಯ ಬ್ಯಾಗೇಜ್​​ಅನ್ನು ಮೂಸಿದ ಪೊಲೀಸ್​ ಬೇಟೆ ನಾಯಿ, ಅದರಲ್ಲಿ ಅಫೀಮು ಇರುವುದನ್ನು ಪತ್ತೆ ಹಚ್ಚಿತು.

ಕಾಟನ್​ ಬ್ಯಾಗೇಜ್​ನಲ್ಲಿ ಒಟ್ಟಾರೆ 5.35 ಕೋಟಿ ರೂಪಾಯಿ ಮೌಲ್ಯದ 1542 ಗ್ರಾಂ ಮೆಥಾಕ್ವಾಲೊನ್ ಮತ್ತು 644 ಗ್ರಾಂ ಹೆರಾಯಿನ್​ ಅನ್ನು ಜಪ್ತಿ ಮಾಡಿ, ಉಗಾಂಡಾ ಮಹಿಳೆಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ಓದಿ:ಬೆಂಗಳೂರಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ABOUT THE AUTHOR

...view details