ಕರ್ನಾಟಕ

karnataka

ETV Bharat / bharat

ಶಿವನ ಕಂಠ ಅಲಂಕರಿಸಿದ ನಾಗರಾಜ : ಎರಡನೇ ಸೋಮವಾರ ನಡೆದ ಮಹಾದೇವನ ಪವಾಡ - राजस्थान लेटेस्ट न्यूज

ರಾಜಸ್ಥಾನದ ನಾಗೌರ್​​ನಲ್ಲಿ ಪವಾಡ ರೀತಿಯ ಘಟನೆಯೊಂದು ನಡೆದಿದೆ. ನಗರದ ಲ್ಯಾಂಡ್ನುವಿನಲ್ಲಿರುವ ಶಿವನ ದೇವಸ್ಥಾನದ ಶಿವನ ಲಿಂಗದ ಮೇಲೆ ಕರಿ ನಾಗರ ಹಾವೊಂದು ಸುತ್ತುವರೆದು ಕುಳಿತಿದೆ. ಇದು ಮಹಾದೇವನ ಪವಾಡವೆಂದು ತಿಳಿದ ಅಪಾರ ಭಕ್ತರು ದೇಗುಲಕ್ಕೆ ಆಗಮಿಸಿ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದಾರೆ..

snake-wrapped-around-dome-of-shiva-temple-in-nagaur-for-four-hours
ಶಿವನ ಕಂಠ ಅಲಂಕರಿಸಿದ ನಾಗರಾಜ

By

Published : Aug 3, 2021, 5:45 PM IST

ನಾಗೌರ್ : ನಗರದ ಲ್ಯಾಂಡ್ನುವಿನಲ್ಲಿರುವ ಶಿವನ ದೇವಸ್ಥಾನದಲ್ಲಿ ಒಂದು ಅಪರೂಪದ ಘಟನೆಯೊಂದು ನಡೆದಿದೆ. ಶಿವಲಿಂಗವನ್ನು ನಾಗರ ಹಾವು ಸುತ್ತುವರೆದು ಕುಳಿತಿದೆ. ಈ ಸದೃಶ್ಯ ಘಟನೆ ನೋಡಲು ಭಕ್ತರು ದೇವಾಲಯದತ್ತ ಧಾವಿಸುತ್ತಿದ್ದಾರೆ.

ಶಿವನ ಕಂಠ ಅಲಂಕರಿಸಿದ ನಾಗರಾಜ

ಶ್ರಾವಣದ ಎರಡನೇ ಸೋಮವಾರ ಮಹಾದೇವನನ್ನು ಪೂಜಿಸಲು ಲ್ಯಾಂಡ್ನುವಿನ ಶಿವ ದೇವಸ್ಥಾನಕ್ಕೆ ಭಕ್ತರು ಬಂದಿದ್ದರು. ಈ ಸಂದರ್ಭದಲ್ಲಿ ದೇವಾಲಯದಲ್ಲಿದ್ದ ಲಿಂಗುವಿನ ಮೇಲೆ ಕರಿ ನಾಗರ ಹಾವೊಂದು ಸುತ್ತುವರಿದು ಕುಳಿತಿತ್ತು. ಜನರು ಕೂಡ ಹಾವನ್ನು ತೆಗೆಯಲು ಸಾಕಷ್ಟು ಪ್ರಯತ್ನಿಸಿದರೂ ಆಗಲಿಲ್ಲ. ಹಾವು ಸುಮಾರು 4 ಗಂಟೆಗಳ ಕಾಲ ಶಿವಲಿಂಗುವಿನ ಮೇಲೆ ಕುಳಿತಿತ್ತು.

ಸುದ್ದಿ ತಿಳಿದ ಜನರು ಹಾಲಿನೊಂದಿಗೆ ಸ್ಥಳಕ್ಕೆ ಆಗಮಿಸಿ ಹಾವಿಗೆ ಹಾಲೆರೆದು ಪೂಜಿಸುತ್ತಿದ್ದಾರೆ. ಮಹಾದೇವನ ಭಕ್ತರು ಶಿವ ದೇವಾಲಯದಲ್ಲಿ ಹಾವು ಕಾಣುವುದನ್ನು ಒಂದು ಶುಭ ಸಂಕೇತವೆಂದು ಪರಿಗಣಿಸುತ್ತಿದ್ದು, ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details