ದಿಯೋಗರ್(ಜಾರ್ಖಂಡ್) :ಬರೋಬ್ಬರಿ 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ(Snake venom) ಮಾರಾಟ ಮಾಡ್ತಿದ್ದ ಇಬ್ಬರ ಬಂಧಿಸುವಲ್ಲಿ(Two persons arrest) ಪೊಲೀಸರು ಯಶಸ್ವಿಯಾಗಿದ್ದಾರೆ. ಜಾರ್ಖಂಡ್ನ ದಿಯೋಗರ್ ಜಿಲ್ಲೆಯ ರೀಮಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಬಂಧಿತ ಆರೋಪಿಗಳನ್ನ ರಂಜನ್ ಕುಮಾರ್ ಪಾಡಿ ಹಾಗೂ ಕೈಲಾಶ್ ಚಂದ್ರು ಸಾಹು ಎಂದು ಗುರುತಿಸಲಾಗಿದ್ದು, ಇವರಿಬ್ಬರು ಸಂಬಲ್ಪುರದ ಸಿಂದೂರ್ಪಂಕ್ನವರು ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಪಡೆದ ಪೊಲೀಸರು ತರಂಗ್ ಗ್ರಾಮದಲ್ಲಿ ದಾಳಿ ನಡೆಸಿದಾಗ, ಇಬ್ಬರು ಹಾವಿನ ವಿಷ ಮಾರಾಟ ವ್ಯವಹಾರದಲ್ಲಿ ಭಾಗಿಯಾಗಿದ್ದರು. ಸ್ಥಳದಲ್ಲೇ ಅವರನ್ನ ಬಂಧಿಸುವ ಬದಲು ಹಿಂಬಾಲಿಸಿಕೊಂಡು ಹೋದ ಪೊಲೀಸರು ಬಳಿಕ ಸಿಂದೂರ್ಪಂಕ್ ಪ್ರದೇಶದಲ್ಲಿ ಅವರಿಗೆ ಬಲೆ ಹಾಕಿದ್ದಾರೆ. ಜೊತೆಗೆ 1.5 ಕೋಟಿ ರೂಪಾಯಿ ಮೌಲ್ಯದ ಹಾವಿನ ವಿಷ ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟೊಂದು ಮೌಲ್ಯದ ವಿಷ ದಿಯೋಗರ್ಗೆ ಮಾರಾಟ ಮಾಡಲು ತೆಗೆದುಕೊಂಡು ಬರಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ:ಲೈಂಗಿಕ ಶೋಷಣೆ: ಡೆತ್ನೋಟ್ ಬರೆದಿಟ್ಟು, 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಕಳೆದ ಕೆಲ ದಿನಗಳ ಹಿಂದೆ ಅಕ್ರಮವಾಗಿ 13 ಕೋಟಿ ರೂ. ಮೌಲ್ಯದ ಹಾವಿನ ವಿಷ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಹೆಡೆಮುರಿ ಕಟ್ಟುವಲ್ಲಿ ಪಶ್ಚಿಮ ಬಂಗಾಳದ ಪೊಲೀಸರು ಯಶಸ್ವಿಯಾಗಿದ್ದರು.