ವಿಶಾಖಪಟ್ಟಣ (ಆಂಧ್ರಪ್ರದೇಶ): ಇಲ್ಲಿನ ವಿಶಾಖ ನಗರದ ಜನನಿಬಿಡ ಪ್ರದೇಶದಲ್ಲೇ ಕಳೆದ ರಾತ್ರಿ ಹಾವೊಂದು ಎಲ್ಲರಲ್ಲೂ ಭೀತಿಯನ್ನುಂಟುಮಾಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಕಾರ್ವೊಂದರಲ್ಲಿ ನುಗ್ಗಿ ಎಷ್ಟೊತ್ತಾದರೂ ಹೊರಗೆ ಬಾರದೇ ಜನರನ್ನು ಬೆಚ್ಚಿಬೀಳಿಸಿತ್ತು. ಕೊನೆಗೆ ಹಾವು ಹಿಡಿಯುವವರು ರಕ್ಷಣೆ ಮಾಡಿದ ಬಳಿಕ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ ಬಾನೆಟ್‌ನೊಳಗೆ ನುಗ್ಗಿದ್ದ ಸರ್ಪ ರಕ್ಷಣೆ - bannet-caught-at-vishakapatnam
ಹಾವು ಎಲ್ಲಿಂದ ಬಂತೋ ಗೊತ್ತಿಲ್ಲ. ಆದರೆ ಕಾರ್ ಬಾನೆಟ್‌ನೊಳಗೆ ಹೋಗಿ ಸೇರಿಕೊಂಡಿತ್ತು. ಎಷ್ಟೊತ್ತಾದರೂ ಹೊರಗೆ ಬಾರದ ಕಾರಣ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿತ್ತು. ಕೊನೆಗೆ ಹಾವು ಹಿಡಿಯುವವರ ಸಹಾಯದಿಂದ ಸರ್ಪವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.

ಹರಸಾಹಸ
ರಸ್ತೆಯ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಹಾವು ಕಾಣಿಸಿಕೊಂಡಿತ್ತು. ಕಾರು ಮುಂಭಾಗದ ಕನ್ನಡಿಯ ಮೇಲೆ ತೆವಳುತ್ತಿತ್ತು. ಇದನ್ನು ಕಂಡ ಜನರು ಗಾಬರಿಯಾಗಿ ಕಿರುಚುತ್ತಾ ಓಡಿದ್ದಾರೆ. ಅಷ್ಟರಲ್ಲಿ ಹಾವು ಕಾರ್ ಬಾನೆಟ್ ಒಳಗೆ ಸೇರಿಕೊಂಡಿತ್ತು. ಎಷ್ಟೇ ಹೊತ್ತಾದರೂ ಹೊರಗೆ ಬರಲಿಲ್ಲ. ಈ ವೇಳೆ ಜನರು ಸ್ನೇಕ್ ಕಿರಣ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಆತ ಹಾವನ್ನು ಹೊರ ಬರುವಂತೆ ಮಾಡಿ ಸೆರೆ ಹಿಡಿದಿದ್ದಾನೆ.
ಸರ್ಪದ ರಕ್ಷಣೆ
ಈ ವೇಳೆ ಸುತ್ತ ನೆರೆದಿದ್ದ ಜನ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಹಾವನ್ನು ರಕ್ಷಣೆ ಮಾಡಿದ ಕಿರಣ್ ಬಳಿಕ ಅದನ್ನು ನಗರ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
Last Updated : Jun 19, 2021, 5:02 PM IST