ಅತಿ ದೊಡ್ಡದಾದ ಹಾವೊಂದು ಅಡಿಕೆ ಮರ ಏರಿರುವ ವಿಡಿಯೋ ವೈರಲ್ಲಾಗಿದೆ. ಮೇಲ್ನೋಟಕ್ಕೆ ಕರಾವಳಿ ಅಥವಾ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಸೆರೆಹಿಡಿದಿರುವ ವಿಡಿಯೋ ಇದು ಎಂದು ಹೇಳಲಾಗುತ್ತಿದ್ದು, ಮತ್ತೊಂದು ಆಯಾಮದಲ್ಲಿ ಈ ವಿಡಿಯೋ ಬೇರೆಯದೇ ರಾಜ್ಯ ಅಥವಾ ಬೇರೆಯದೇ ದೇಶದ್ದಾಗಿರಬಹುದೆಂದು ಹೇಳಲಾಗುತ್ತಿದೆ.
Viral Video: ಬೃಹತ್ ಹಾವು ಅಡಿಕೆ ಮರ ಹತ್ತೋದು ನೋಡಿದ್ದೀರಾ? - ಹಾವು ಮರ ಹತ್ತಿದ ವಿಡಿಯೋ ವೈರಲ್
ಹಾವೊಂದು ಅಡಿಕೆ ಮರ ಏರುವ 'ಸಾಹಸ'ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
![Viral Video: ಬೃಹತ್ ಹಾವು ಅಡಿಕೆ ಮರ ಹತ್ತೋದು ನೋಡಿದ್ದೀರಾ? snake climbing areca tree: video viral](https://etvbharatimages.akamaized.net/etvbharat/prod-images/768-512-14071715-thumbnail-3x2-raaa.jpg)
Viral Video: ಬೃಹತ್ ಹಾವು ಅಡಿಕೆ ಮರ ಹತ್ತೋದು ನೋಡಿದ್ದೀರಾ?
ಮರ ಹತ್ತಿದ ಹಾವು
ಅಡಿಕೆ ಮರಕ್ಕೆ ಸುರುಳಿ ಸುರುಳಿಯಾಗಿ ಸುತ್ತಿಕೊಂಡಂತೆ ಹಂತ ಹಂತವಾಗಿ ಹಾವು ಮೇಲೇರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಈ ಹಾವಿನ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಹೆಬ್ಬಾವಿನಂತೆ ಕಂಡರೂ ಸೂಕ್ಷ್ಮವಾಗಿ ಗಮನಿಸಿದಾಗ ಅದು ಹೆಬ್ಬಾವು ಅಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇದನ್ನೂ ಓದಿ:ಒಳಗೆ ಸೇರಿದರೆ ಗುಂಡು.. ಹುಡುಗಿಯ ರಂಪಾಟ ಕಂಡು ಪೊಲೀಸರೇ ಬೆಚ್ಚಿಬಿದ್ದರು-Video