ಮಲಪ್ಪುರಂ: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಹಿಳಾ ಕ್ಯಾಬಿನ್ ಸಿಬ್ಬಂದಿಯನ್ನು (Air India Express woman cabin crew) ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮಲಪ್ಪುರಂ ಮೂಲದ ಶಹಾನಾ ಬಂಧಿತೆ. ಶಾರ್ಜಾದಿಂದ ಕೋಝಿಕ್ಕೋಡ್ಗೆ ಬಂದ ಈಕೆ ತನ್ನ ಒಳಉಡುಪಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬಳಸಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗುತ್ತಿದ್ದಳು.