ಕರ್ನಾಟಕ

karnataka

ETV Bharat / bharat

'ಸ್ತ್ರೀ ದ್ವೇಷಿ ವ್ಯಕ್ತಿ': ಸಂಸತ್ತಿನಲ್ಲಿ ರಾಹುಲ್ 'ಫ್ಲೈಯಿಂಗ್‌ ಕಿಸ್'ಗೆ ಸ್ಮೃತಿ ಇರಾನಿ ಆರೋಪ; ಸ್ಪೀಕರ್‌ಗೆ ಶೋಭಾ ಕರಂದ್ಲಾಜೆ ದೂರು - Rahul Gandhi

Rahul Gandhi's 'flying kiss' in Parliament: ಲೋಕಸಭೆಯಲ್ಲಿ ಇಂದು ತಮ್ಮ ಭಾಷಣದ ನಂತರ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ 'ಫ್ಲೈಯಿಂಗ್​ ಕಿಸ್​'ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Etv Bharat
'Flying Kiss' in Parliament: ರಾಹುಲ್​ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಆಕ್ರೋಶ, ಸ್ಪೀಕರ್​ಗೆ ಬಿಜೆಪಿ ಮಹಿಳಾ ಸಂಸದೆಯರ ದೂರು

By

Published : Aug 9, 2023, 3:57 PM IST

Updated : Aug 9, 2023, 6:18 PM IST

ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಲೋಕಸಭೆಯಲ್ಲಿಂದು ಮಣಿಪುರ ಹಿಂಸಾಚಾರ ವಿಷಯವಾಗಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿ ಮೇಲೆ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರು ತಮ್ಮ ಭಾಷಣದ ನಂತರ 'ಫ್ಲೈಯಿಂಗ್​ ಕಿಸ್​' (ಗಾಳಿಯಲ್ಲಿ ಮುತ್ತು) ನೀಡಿದ್ದಕ್ಕೆ ಬಿಜೆಪಿ ಮಹಿಳಾ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್​ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್​ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸದನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರತ್ತ ರಾಹುಲ್​ ಗಾಂಧಿ 'ಅನುಚಿತ ಸನ್ನೆ' ಮಾಡಿದ್ದಾರೆ ಎಂದು ಆರೋಪಿಸಿ ಸ್ಪೀಕರ್‌ ಭೇಟಿ ಮಾಡಿದ 20ಕ್ಕೂ ಹೆಚ್ಚು ಸಂಸದೆಯರು ದೂರು ನೀಡಿದರು. ''ಸದನದಲ್ಲಿ ಕೇರಳದ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಅವರ ನಡೆಯ ಬಗ್ಗೆ ಗಮನ ಸೆಳೆಯಲು ಬಯಸುತ್ತೇವೆ. ರಾಹುಲ್ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಜುಬಿನ್​ ಇರಾನಿ ಅವರತ್ತ ಅನುಚಿತ ಸನ್ನೆ ಮಾಡಿದ್ದಾರೆ. ಈ ವರ್ತನೆ ತೋರಿದ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. ಇದು ಕೇವಲ ಮಹಿಳಾ ಸದಸ್ಯರ ಗೌರವಕ್ಕೆ ಅಪಮಾನ ಮಾಡಿರುವ ವಿಚಾರವಲ್ಲ, ಇಡೀ ಸದನದ ಗೌರವಕ್ಕೆ ಅಪಖ್ಯಾತಿ ಹಾಗೂ ಅದಕ್ಕೆ ಕುಂದು ತಂದಿದೆ'' ಎಂದು ಆರೋಪಿಸಿದ್ದಾರೆ.

ಸ್ತ್ರೀ ದ್ವೇಷಿ ವ್ಯಕ್ತಿ- ಸ್ಮೃತಿ ಇರಾನಿ ಆರೋಪ: ಇದಕ್ಕೂ ಮುನ್ನ, ಇದೇ ವಿಷಯವಾಗಿ ಸದನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದರು. "ಸ್ತ್ರೀದ್ವೇಷದ ನಡವಳಿಕೆ ಸಂಸತ್ತಿನಲ್ಲಿ ಹಿಂದೆಂದೂ ನಡೆದಿರಲಿಲ್ಲ. ಮಹಿಳೆಯರ ಘನತೆಯನ್ನು ಕಾಪಾಡುವ ಕಾನೂನುಗಳನ್ನು ರಚಿಸುವ ಜನರ ಸದನವು, ಅಧಿವೇಶನದ ಅವಧಿಯಲ್ಲೇ ಸ್ತ್ರೀದ್ವೇಷಕ್ಕೆ ಸಾಕ್ಷಿಯಾದಾಗ, ಅವರನ್ನು ತರಾಟೆಗೆ ತೆಗೆದುಕೊಳ್ಳಬಾರದೇ ಎಂಬುದು ನನ್ನ ಪ್ರಶ್ನೆ'' ಎಂದರು.

ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಎಲ್ಲ ಮಹಿಳಾ ಸದಸ್ಯರಿಗೆ 'ಫ್ಲೈಯಿಂಗ್ ಕಿಸ್' ಕೊಟ್ಟು ರಾಹುಲ್ ಗಾಂಧಿ ಹೊರಟು ಹೋದರು. ಇದು ಸದಸ್ಯರೊಬ್ಬರ ಅಸಭ್ಯ ವರ್ತನೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಈ ರೀತಿ ಆಗಿಲ್ಲ ಎಂದು ಹಿರಿಯ ಸದಸ್ಯರೇ ಹೇಳುತ್ತಿದ್ದಾರೆ. ಇದು ಯಾವ ರೀತಿಯ ವರ್ತನೆ?, ಇವರು ಎಂತಹ ನಾಯಕ?, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಸ್ಪೀಕರ್‌ಗೆ ದೂರು ನೀಡಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದೇವೆ'' ಎಂದು ಹೇಳಿದರು.

ಇದನ್ನೂ ಓದಿ:ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ, ಮೋದಿ ಅಮಿತ್ ಶಾ, ಅದಾನಿ ಮಾತು ಮಾತ್ರ ಕೇಳ್ತಿದ್ದಾರೆ: ರಾಹುಲ್​ ವಾಗ್ದಾಳಿ

Last Updated : Aug 9, 2023, 6:18 PM IST

ABOUT THE AUTHOR

...view details