ನವದೆಹಲಿ:ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್‌ಸಿಪಿ ಸಿಂಗ್ ರಾಜೀನಾಮೆಯಿಂದ ತೆರವಾದ ಖಾತೆಗಳನ್ನು ಸ್ಮೃತಿ ಇರಾನಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ನಖ್ವಿ ಅವರು ಮೋದಿ ಸಂಪುಟದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದರೆ, ಆರ್‌ಸಿಪಿ ಸಿಂಗ್ ಅವರು ಉಕ್ಕು ಖಾತೆಯನ್ನು ನಿರ್ವಹಿಸುತ್ತಿದ್ದರು.
ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆ ಹೊಣೆ - ಕೇಂದ್ರ ಸಚಿವರ ರಾಜೀನಾಮೆ
ರಾಜ್ಯಸಭೆ ಅಧಿಕಾರಾವಧಿ ಮುಗಿದ ಕಾರಣ ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್‌ಸಿಪಿ ಸಿಂಗ್ ನಿನ್ನೆ ರಾಜೀನಾಮೆ ನೀಡಿದ್ದರು.
ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆ ಹೊಣೆ
ಇಬ್ಬರು ಸಚಿವರ ರಾಜೀನಾಮೆಯಿಂದ ಖಾಲಿ ಉಳಿದ ಖಾತೆಗಳನ್ನು ಪ್ರಧಾನಮಂತ್ರಿ ಮೋದಿ ಅವರು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಗೆ ಅಲ್ಪಸಂಖ್ಯಾತ ವ್ಯವಹಾರ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಉಕ್ಕು ಖಾತೆಯ ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಉಪರಾಷ್ಟ್ರಪತಿ ಅಥವಾ ರಾಜ್ಯಪಾಲ, ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಆರಗ, ಸಿದ್ದು, ಹೆಚ್ಡಿಕೆ ಸೇರಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 179 ಜನಪ್ರತಿನಿಧಿಗಳು
TAGGED:
ಕೇಂದ್ರ ಸಚಿವರ ರಾಜೀನಾಮೆ