ನವದೆಹಲಿ:ಎಐಎಂಐಎಂ ಮುಖಂಡ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸಕ್ಕೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆಯ ಕಿಡಿಕಿ, ಗೇಟ್ ಸೇರಿದಂತೆ ಅನೇಕ ಪರಿಕರ ಒಡೆದು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದ ದೆಹಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಅಸಾದುದ್ದೀನ್ ಓವೈಸಿ ಈ ನಿವಾಸದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮಹಿಳೆಯಿಂದ ಪುರುಷ, ಪುರುಷನಿಂದ ಮಹಿಳೆಯರಿಗೆ ಮಸಾಜ್ ನಿಷೇಧ : ದೆಹಲಿಯಲ್ಲಿ ಹೊಸ ರೂಲ್ಸ್!
ಓವೈಸಿ ಅಧಿಕೃತ ನಿವಾಸದ ಉಸ್ತುವಾರಿಯನ್ನು ದೀಪಾ ನೋಡಿಕೊಳ್ಳುತ್ತಿದ್ದು, ಅವರು ತಿಳಿಸಿರುವ ಪ್ರಕಾರ 7-8 ದಾಳಿಕೋರರು ಮನೆಯೊಳಗೆ ಇಟ್ಟಿಗೆ ಎಸೆದಿದ್ದಾಗಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳು ದೆಹಲಿಯ ಮಂಡೋಲಿ ಪ್ರದೇಶದ ನಿವಾಸಿಗಳು ಎಂದು ಹೇಳಲಾಗುತ್ತಿದ್ದು, ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.