ಗಡಚಿರೋಲಿ( ಮಹಾರಾಷ್ಟ್ರ): ಬುದ್ಧಿವಂತ ಹೆಣ್ಣು ಆನೆಯೊಂದು ಕೈ ಪಂಪ್ ಮಾಡಿ ನೀರು ಕುಡಿದು ದಾಹ ತಿರಿಸಿಕೊಂಡ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಗಜರಾಣಿಯ ಟಾಲೆಂಟ್ಗೆ ಫುಲ್ ಫಿದಾ ಆಗಿದ್ದಾರೆ.
Watch Video: ನೀರೆಯರನ್ನೆ ನಾಚಿಸಿದ 'ಗಜರಾಣಿ': ರೂಪಾ ಬುದ್ಧಿವಂತಿಕೆಗೆ ಜನ ಫಿದಾ - ಅಹೆರಿ ತಹಸಿಲ್‌ನ ಕಮಲಾಪುರದ ಆನೆ ಶಿಬಿರ
ಮಹಾರಾಷ್ಟ್ರ ರಾಜ್ಯದ ಕಮಲಾಪುರ ಆನೆ ಶಿಬಿರದಲ್ಲಿರುವ ಆನೆ ರೂಪಾ ತನ್ನ ಬಾಯಾರಿಕೆ ತೀರಿಸಿಕೊಳ್ಳಲು ಬೋರ್ವೆಲ್ ಪಂಪ್ ಮೊರೆ ಹೋಗಿದ್ದಾಳೆ. ನೀರು ಕುಡಿಯಲು ಜನರು ಪಂಪ್ ಮಾಡುವದನ್ನು ನೋಡಿದ ರೂಪಾ ತಾನೂ ಅವರಂತೆ ಪಂಪ್ ಮಾಡುವುದನ್ನ ಕಲಿತಿದ್ದಾಳೆ ಎಂದು ಅರಣ್ಯ ಸಿಬ್ಬಂದಿ ಹೇಳುತ್ತಾರೆ.
ಈ ಅಪರೂಪದ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅಹೆರಿ ತಹಸಿಲ್‌ನ ಕಮಲಾಪುರದ ಆನೆ ಶಿಬಿರದಲ್ಲಿ ನಡೆದಿದೆ. ಶಿಬಿರದಲ್ಲಿರುವ ಆನೆ ರೂಪಾ ತನ್ನ ಬಾಯಾರಿಕೆ ತೀರಿಸಿಕೊಳ್ಳಲು ಕೈ ಪಂಪ್ ಮೊರೆ ಹೋಗಿದ್ದಾಳೆ.
ಅರಣ್ಯ ಸಿಬ್ಬಂದಿ ಹೇಳುವಂತೆ, ನೀರು ಕುಡಿಯಲು ಜನರು ಕೈ ಪಂಪ್ ಬಳಸುವುದನ್ನು ನೋಡಿದ ರೂಪಾ ತಾನೂ ಪಂಪ್ ಮಾಡುವುದನ್ನ ಕಲಿತಿದ್ದಾಳೆ. ಆನೆಗಳಿಗೆ ಇಲ್ಲಿ ನೀರು ಕುಡಿಯಲು ದೊಡ್ಡ ಸರೋವರವಿದ್ದರೂ ಕೆಲವೊಮ್ಮೆ ಪಂಪ್ ಮಾಡುವ ಮೂಲಕ ಆನೆ ನೀರು ಕುಡಿಯುತ್ತದೆ ಎಂದು ಹೇಳುತ್ತಾರೆ. ಪ್ರವಾಸಿಗರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.