ಹೈದರಾಬಾದ್: ಆಕರ್ಷಕ ಡಿಸ್ಕೌಂಟ್ ಮತ್ತು ಆಫರ್ಗಳ ಮೂಲಕ ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತವೆ. ನೀವು ಖರೀದಿ ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ 5 ರಿಂದ 10 ರವರೆಗೆ ಉಳಿತಾಯವಾಗುವುದು ನಿಜ. ಆದರೆ, ಹೀಗೆ ಕಾರ್ಡ್ ಬಳಸುವಾಗ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಸುರಕ್ಷಿತ ಹಾಗೂ ಜಾಣ್ಮೆಯಿಂದ ಕ್ರೆಡಿಟ್ ಕಾರ್ಡ್ ಬಳಸುವ ಕೆಲ ಟಿಪ್ಸ್ ಇಲ್ಲಿವೆ.
ನಿಮ್ಮ ಕಾರ್ಡ್ ಬಗ್ಗೆ ತಿಳಿದುಕೊಳ್ಳಿ: ನಿಮ್ಮ ಕಾರ್ಡ್‌ನ ಕ್ರೆಡಿಟ್ ಲಿಮಿಟ್ ಎಷ್ಟು? ನೀವು ಅದರಲ್ಲಿ ಎಷ್ಟು ಬಳಸಿದ್ದೀರಿ? ಬಿಲ್ ಬಾಕಿ ಎಷ್ಟು? ಈ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಹೊಸ ಖರೀದಿಯನ್ನು ಮಾಡುವ ಮೊದಲು ರಿವಾರ್ಡ್ ಪಾಯಿಂಟ್‌ಗಳು ಮತ್ತು ಬಿಲ್ಲಿಂಗ್ ಬಾಕಿ ದಿನಾಂಕಗಳನ್ನು ಪರಿಶೀಲಿಸಿ. ಆಗ ಮಾತ್ರ, ಯಾವ ಕಾರ್ಡ್ ಅನ್ನು ಬಳಸಬೇಕು ಮತ್ತು ಮೊತ್ತವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಹೀಗೆ ಪ್ರಾರಂಭಿಸಿ: ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿ ಮಾಡಿದ ನಂತರ ನೀವು 30 ರಿಂದ 40 ದಿನಗಳ ಸಮಯವನ್ನು ಪಡೆಯುತ್ತೀರಿ. ಬಿಲ್ಲಿಂಗ್ ದಿನಾಂಕದ ಆರಂಭದಲ್ಲಿ ಕಾರ್ಡ್ ಅನ್ನು ಬಳಸಿದಾಗ ಮಾತ್ರ ನೀವು ಈ ಪ್ರಯೋಜನವನ್ನು ಪಡೆಯಬಹುದು. ಉದಾಹರಣೆಗೆ, ನಿಮ್ಮ ಬಿಲ್ಲಿಂಗ್ ದಿನಾಂಕವು 8 ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿದರೆ, ನಂತರ 9 ಮತ್ತು 15 ರ ದಿನಾಂಕದ ನಡುವಿನ ಖರೀದಿಗಳು ನಿಮಗೆ ಸಮಯದ ಪ್ರಯೋಜನವನ್ನು ನೀಡುತ್ತದೆ.
ರಿಯಾಯಿತಿಗಳನ್ನು ಬಿಡಬೇಡಿ: ಕೆಲವು ಬ್ರ್ಯಾಂಡ್‌ಗಳು ಕ್ರೆಡಿಟ್ ಕಾರ್ಡ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ ಮತ್ತು ಸಾಮಾನ್ಯ ರಿಯಾಯಿತಿಗಳನ್ನು ಮೀರಿ ವಿಶೇಷ ರಿಯಾಯಿತಿಗಳನ್ನು ನೀಡುತ್ತವೆ. ಇದು ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ದೊರೆಯುತ್ತದೆ. ಎರಡು ಅಥವಾ ಮೂರು ಕಾರ್ಡ್‌ಗಳನ್ನು ಹೊಂದಿರುವವರು ಯಾವ ಕಾರ್ಡ್‌ನಿಂದ ಹೆಚ್ಚಿನ ರಿಯಾಯಿತಿ ಪಡೆಯುತ್ತಾರೆ ಎಂಬುದನ್ನು ತಿಳಿದಿರಬೇಕು. ಇದರಿಂದ ಅವರು ಸ್ವಲ್ಪ ಹಣವನ್ನು ಉಳಿಸಬಹುದು.