ಕರ್ನಾಟಕ

karnataka

ದೆಹಲಿ ಮೆಟ್ರೋನಲ್ಲಿ ಟ್ರ್ಯಾಕ್ಟರ್ ಪೆರೇಡ್‌ ಬೆಂಬಲಿಸುವಂತೆ ವ್ಯಕ್ತಿಯೊಬ್ಬನಿಂದ ಘೋಷಣೆ: ಅಧಿಕಾರಿಗಳಿಂದ ತನಿಖೆ

By

Published : Jan 25, 2021, 6:41 AM IST

ನೋಯ್ಡಾದಿಂದ ದೆಹಲಿ ಮೆಟ್ರೋದ ದ್ವಾರಕಾಗೆ ಹೋಗುವ ನೀಲಿ ಮಾರ್ಗದಲ್ಲಿ ಮೆಟ್ರೋ ಹತ್ತಿದ ವ್ಯಕ್ತಿಯೋರ್ವ ಜನವರಿ 26 ರಂದು ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ಪೆರೇಡ್ ಬೆಂಬಲಿಸುವಂತೆ ಘೋಷಣೆ ಕೂಗಿದ್ದು ಈ ಬಗ್ಗೆ ದೆಹಲಿ ಮೆಟ್ರೊ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Slogans supporting the farmers movement in Delhi Metro
ಟ್ರ್ಯಾಕ್ಟರ್ ಪೆರೇಡ್‌ ಬೆಂಬಲಿಸುವಂತೆ ವ್ಯಕ್ತಿಯೊಬ್ಬನಿಂದ ಘೋಷಣೆ

ನವದೆಹಲಿ: ಭಾನುವಾರ ರಾತ್ರಿ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೊ ಹತ್ತಿದ ವ್ಯಕ್ತಿಯೊಬ್ಬರು ಜನವರಿ 26 ರಂದು ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ಪರೇಡ್‌ ಬೆಂಬಲಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ ಕೋಲಾಹಲ ಉಂಟಾಗಿದೆ.

ಟ್ರ್ಯಾಕ್ಟರ್ ಪೆರೇಡ್‌ ಬೆಂಬಲಿಸುವಂತೆ ವ್ಯಕ್ತಿಯೊಬ್ಬನಿಂದ ಘೋಷಣೆ

ನೋಯ್ಡಾದಿಂದ ದೆಹಲಿ ಮೆಟ್ರೋದ ದ್ವಾರಕಾಗೆ ಹೋಗುವ ನೀಲಿ ಮಾರ್ಗದಲ್ಲಿ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹತ್ತಿದ ವ್ಯಕ್ತಿಯೋರ್ವ ರೈತರ ಆಂದೋಲನ ಪರ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವ್ಯಕ್ತಿ ಮೆಟ್ರೊದಲ್ಲಿ ಪ್ರಯಾಣಿಸುವ ಜನರಿಗೆ ರೈತರು ಸಾಲದಲ್ಲಿದ್ದಾರೆ, ಆದ್ದರಿಂದ ಎಲ್ಲರೂ ಜನವರಿ 26 ರಂದು ರೈತರ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಿ ಅದಕ್ಕೆ ಸಹಕರಿಸಬೇಕು. ಈ ವ್ಯಕ್ತಿಯೊಂದಿಗೆ 2 ರಿಂದ 3 ಮಹಿಳೆಯರು ಸಹ ಪ್ರಯಾಣಿಸುತ್ತಿದ್ದರು, ಅವರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು.

ದೆಹಲಿ ಮೆಟ್ರೊ ವಕ್ತಾರರು ಈ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಮತ್ತು ಇಡೀ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಈ ಸಂಪೂರ್ಣ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details